ಟೀಂ ಇಂಡಿಯಾ-ಸುನೀಲ್ ಗವಾಸ್ಕರ್
ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ, ಸುನೀಲ್ ಗವಾಸ್ಕರ್ ಅವರು 2019ರ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಭಾರತವಲ್ಲ ಎಂದು ಹೇಳಿದ್ದಾರೆ.
2015ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ತಂಡ ಸಾಕಷ್ಟು ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ. ಇನ್ನು 2019ರ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವುದರಿಂದ ಇದು ಸಹ ಇಂಗ್ಲೆಂಡ್ ಗೆ ಪೂರಕವಾಗಲಿದ್ದು ಟ್ರೋಫಿ ಗೆಲ್ಲುವ ಫೆವರೇಟ್ ತಂಡವಾಗಿದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
2015ರಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತ ಬಳಿಕ ಇಂಗ್ಲೆಂಡ್ ತಂಡ ಅಲ್ಲಿಂದಿಚೆಗೆ ತನ್ನ ಆಟವನ್ನು ಬದಲಿಸಿಕೊಂಡ ರೀತಿ, ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡ ರೀತಿಯಲ್ಲಿನ ಹಲವು ಬದಲಾವಣೆಗಳು ತಂಡ ಬಲಿಷ್ಠವಾಗಿ ಬೆಳೆಯುವಂತೆ ಆಗಿದೆ. ಇನ್ನು ಉತ್ತಮ ಆರಂಭಿಕ ಜೋಡಿಯನ್ನು ಹೊಂದಿದ್ದಾರೆ. ಉತ್ತಮ ಆಲ್ರೌಂಡರ್ ತಂಡದಲ್ಲಿದ್ದಾರೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಇಂಗ್ಲೆಂಡ್ ನಂತರ ವಿಶ್ವಕಪ್ ಗೆಲ್ಲುವ ಎರಡನೇ ಸ್ಥಾನದಲ್ಲಿ ಭಾರತವಿದೆ ಎಂದು ಗವಾಸ್ಕರ್ ಹೇಳಿದ್ದಾರೆ.