ಏಕದಿನ ಕ್ರಿಕೆಟ್ ನಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದ್ದು ಸ್ಕಾಟ್ಲೆಂಡ್ ತಂಡ ಕೇವಲ 3.2 ಓವರ್ ನಲ್ಲೇ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಓಮನ್ ತಂಡ 17.1 ಓವರ್ ನಲ್ಲಿ 24 ರನ್ ಗಳಿಗೆ ಸರ್ವಪತನ ಕಂಡಿತು. 25 ರನ್ ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 3.2 ಓವರ್ ನಲ್ಲಿ ಗುರಿ ಮುಟ್ಟಿದೆ.
ಓಮನ್ ಪರ ಐವರು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಸ್ಕಾಟ್ಲೆಂಡ್ ಪರ ರುಯ್ ಡ್ರಿ ಸ್ಮಿತ್ ಮತ್ತು ಅಡ್ರಿಯಾನ್ ನೈಲ್ ತಲಾ 4 ವಿಕೆಟ್ ಪಡೆದಿದ್ದಾರೆ.