ಕ್ರಿಕೆಟ್

ವೆಸ್ಟ್​ ಇಂಡೀಸ್​ ತಂಡದ ದೈತ್ಯ ದಾಂಡಿಗ ಕ್ರಿಸ್​ ಗೇಲ್​ ನಿಂದ ಒಂದೇ ಪಂದ್ಯದಲ್ಲಿ ಹಲವು ದಾಖಲೆ!

Srinivas Rao BV
ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ದಾಂಡಿಗ ಕ್ರಿಸ್ ಗೇಲ್ ಒಂದೇ ಪಂದ್ಯದಲ್ಲಿ ಹಲವು ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.  
ಇಂಗ್ಲೆಂಡ್ ವಿರುದ್ಧ ತಮ್ಮ ಕ್ರಿಕೆಟ್ ವೃತ್ತಿ ಜೀವನದ 24 ನೇ ಏಕದಿನ ಪಂದ್ಯವನ್ನಾಡಿರುವ ಕ್ರಿಸ್ ಗೇಲ್, 135 ರನ್ ಗಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರನೆಂಬ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆಯ ಖ್ಯಾತಿ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ ಅವರ ಹೆಸರಿನಲ್ಲಿತ್ತು.
2019 ರ ವಿಶ್ವಕಪ್ ನಂತರ ನಿವೃತ್ತಿಯಾಗುವುದಾಗಿ ಘೋಷಿಸಿರುವ ಕ್ರಿಸ್ ಗೇಲ್ ಖಾತೆಯಲ್ಲಿ ಒಟ್ಟು 477 ಸಿಕ್ಸರ್ ಗಳಿದ್ದು, 476 ಸಿಕ್ಸರ್ ಗಳನ್ನು ದಾಖಲಿಸಿದ್ದ ಶಾಹಿದ್ ಅಫ್ರೀದಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 129 ಎಸೆತಗಳ ಇನ್ನಿಂಗ್ಸ್ ನಲ್ಲಿ 12 ಸಿಕ್ಸರ್ ಗಳನ್ನು ದಾಖಲಿಸಿರುವ ಕ್ರಿಸ್ ಗೇಲ್ ತಂಡ ಒಟ್ಟಾರೆ 23 ಸಿಕ್ಸರ್ ಗಳನ್ನು ದಾಖಲಿಸಿದ್ದು ಏಕದಿನ ಪಂದ್ಯದಲ್ಲಿ ಇದೊಂದು ಹೊಸ ದಾಖಲೆಯಾಗಿದೆ. 
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರನ್ ಚೇಸಿಂಗ್ ನಲ್ಲೂ ಸಹ ವೆಸ್ಟ್ ಇಂಡೀಸ್ ದಾಖಲೆ ಬರೆದಿದೆ. 
SCROLL FOR NEXT