ಕ್ರಿಕೆಟ್

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಿಂದ ಹರ್ಮಾನ್‌ ಪ್ರೀತ್‌ ಕೌರ್‌ ಔಟ್!

Srinivasamurthy VN
ಮುಂಬೈ: ಮುಂಬರುವ ಭಾರತ ಮಹಿಳಾ ತಂಡದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸಲಾಗಿದ್ದು, ಹರ್ಮಾನ್‌ಪ್ರೀತ್‌ ಕೌರ್‌ ಅವರು ಗಾಯಾದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಈ ಹಿಂದೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಕೌರ್‌ ಪಾದಕ್ಕೆ ಗಾಯವಾಗಿತ್ತು. ಇನ್ನೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರು ನಾಳೆಯಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 
ಗಾಯದ ಸಮಸ್ಯೆಯಿಂದಾಗಿ ಹರ್ಮನ್ ಪ್ರೀತ್ ಕೌರ್ ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಚಟುವಟಿಕೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ಅವರಿಗೆ ಕಾಲಿನಲ್ಲಿ ತುಂಬಾ ನೋವಿರುವ ಕಾರಣ ಆಡಲು ಸಾಧ್ಯವಾಗುತ್ತಿಲ್ಲ. ಐಸಿಸಿ ಮಹಿಳಾ ಚಾಂಪಿಯನ್ ಶಿಪ್‌ನ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು  ಪಂದ್ಯಗಳ ಟಿ-20 ಸರಣಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆಯಿಂದ ಮಾರ್ಚ್‌ 4 ರವರೆಗೆ ನಡೆಯಲಿದೆ. ಕೌರ್‌ ಸ್ಥಾನಕ್ಕೆ ಹರ್ಲೀನ್‌ ಡಿಯೋಲ್ ಗೆ ಅವಕಾಶ ನೀಡಲಾಗಿದೆ.
ಏಕದಿನ ಸರಣಿಗೆ ಭಾರತ ಮಹಿಳಾ ತಂಡ: 
ಮಿಥಾಲಿ ರಾಜ್ (ನಾಯಕಿ), ಜೂಲಾನ್ ಗೋಸ್ವಾಮಿ, ಸ್ಮೃತಿ ಮಂದಾನ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಆರ್ .ಕಲ್ಪನಾ (ವಿಕೆಟ್ ಕೀಪರ್), ಮೋನಾ ಮೆಶ್ರಾಮ್, ಏಕ್ತಾ ಬಿಸ್ಟ್‌, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಶಿಖಾ ಪಾಂಡೆ, ಮಾನ್ಸಿ ಜೋಶಿ, ಪೂನಮ್ ರಾವತ್, ಹರ್ಲೀನ್ ಡಿಯೋಲ್.
SCROLL FOR NEXT