ಕ್ರಿಕೆಟ್

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್ ಜೊತೆ ಟೀಂ ಇಂಡಿಯಾ ಆಡಲ್ಲ... ಕೇಂದ್ರದ ಸಂದೇಶಕ್ಕೆ ಬಿಸಿಸಿಐ ಓಕೆ?

Vishwanath S
ನವದೆಹಲಿ: ಪುಲ್ವಾಮಾ ಉಗ್ರ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಜೊತೆಗೆ ಟೀಂ ಇಂಡಿಯಾ ಆಡಬಾರದು ಎನ್ನುವ ಬಲವಾದ ಕೂಗಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಹ ಸ್ಪಂದಿಸಿದ್ದು ಪಾಕ್ ಜೊತೆ ಟೀಂ ಇಂಡಿಯಾ ಆಡದಿರಲು ತೀರ್ಮಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 
ಮೇ 30ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಮಹಾ ಸಮರ ಆರಂಭವಾಗಲಿದ್ದು ವಿಶ್ವಕಪ್ ನಲ್ಲಿ ಭಾರತ ತಂಡ ಭಾಗಿಯಾಗುವ ಕುರಿತಂತೆ ಇಂದು ದೆಹಲಿಯಲ್ಲಿ ಬಿಸಿಸಿಐ ಮಹತ್ವದ ಸಭೆ ನಡೆಸಿ ಚರ್ಚೆ ನಡೆಸಿದೆ.
ಬಿಸಿಸಿಐಗೆ ಕೇಂದ್ರ ಸರ್ಕಾರ ಸಂದೇಶ ರವಾನಿಸಿದ್ದು ಪಾಕ್ ಜೊತೆಗೆ ಆಡದಿರುವಂತೆ ಸೂಚಿಸಿದ್ದು ಈ ಮೂಲಕ ಪಾಕಿಸ್ತಾನಕ್ಕೆ ಮತ್ತಷ್ಟು ಬಿಸಿ ಮುಟ್ಟಿಸುವ ಇರಾದೆ ಹೊಂದಿದೆ ಎನ್ನಲಾಗಿದೆ. 
ನಾಕೌಟ್ ಹಂತದಲ್ಲಿ ಪಾಕ್ ಜೊತೆಗೆ ಆಡದಿರಲು ಭಾರತ ಸಿದ್ಧವಿದೆ. ಆದರೆ ಈ ನಿರ್ಧಾರದಿಂದ ಐಸಿಸಿ ಹಾಗೂ ವಿಶ್ವಕಪ್ ಪ್ರಾಯೋಜಕರಿಗೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯನ್ನು ಕ್ರಿಕೆಟ್ ಪಂಡಿತರು ವ್ಯಕ್ತಪಡಿಸಿದ್ದಾರೆ.
SCROLL FOR NEXT