ಕ್ರಿಕೆಟ್

ಮೈದಾನದಲ್ಲಿ ಕೊಹ್ಲಿಯ ’ವಿರಾಟ’ ವರ್ತನೆ ಟೀಕಾಕಾರರಿಗೆ ಕಪಿಲ್ ದೇವ್ ತೀಕ್ಷ್ಣ ಉತ್ತರ ಇದು!

Srinivas Rao BV
ಚೆನ್ನೈ: ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಆನ್ ಫೀಲ್ಡ್ ನಲ್ಲಿ ಆಕ್ರಮಣಕಾರಿ ವರ್ತನೆ ಟೀಕಾಕಾರರು ಹೆಚ್ಚುತ್ತಿದ್ದು, ಟೀಕಾಕಾರರಿಗೆ ಕಪಿಲ್ ದೇವ್ ತೀಕ್ಷ್ಣ ಉತ್ತರ ನೀಡಿದ್ದು, ಮೈದಾನದಲ್ಲಿ ವಿರಾಟ್ ಕೊಹ್ಲಿಯ ಕಾರ್ಯಕ್ಷಮತೆ, ಪ್ರದರ್ಶನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ಅವರ ಆಕ್ರಮಣಕಾರಿ ವರ್ತನೆಯ ಬಗ್ಗೆಯಲ್ಲ ಎಂದು ಸಲಹೆ ನೀಡಿದ್ದಾರೆ.  
ಕೊಹ್ಲಿ ಬೆಂಬಲಕ್ಕೆ ನಿಂತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಧೋನಿ ಸಂಯಮದಿಂದ ಇರುತ್ತಿದ್ದರು, ಅದು ಪಂದ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ? ಇಂಥಹದ್ದನ್ನೆಲ್ಲಾ ಪ್ರಶ್ನಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ಚಿಂತನೆಗಳಿರುತ್ತವೆ. ಅದನ್ನು ಹೇಗೆ ಸ್ವೀಕರಿಸುತ್ತೀರ ಎಂಬುದು ನಿಮಗೆ ಬಿಟ್ಟಿದ್ದು ಎಂದು ಕಪಿಲ್ ದೇವ್ ಹೇಳಿದ್ದಾರೆ. 
ಕೊಹ್ಲಿ ಕಾರ್ಯಕ್ಷಮತೆ ಹಾಗೂ ಪ್ರದರ್ಶನ ಉತ್ತಮವಾಗಿರುವವರೆಗೂ ಸಹ ಉತ್ತಮ ಫಲಿತಾಂಶಗಳು ಸಿಗುತ್ತವೆ, ಎಲ್ಲವೂ ಸರಿ ಇರಲಿದೆ. ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಬೇಕೆಂದು ನಿರೀಕ್ಷಿಸುವುದು ಸೂಕ್ತವಲ್ಲ ಎಂದು ಕಪಿಲ್ ದೇವ್ ಅಭಿಪ್ರಾಯಪಾಟ್ಟಿದ್ದಾರೆ.
ಜನತೆ ಕೋಹ್ಲಿಯ ಪ್ರದರ್ಶನ ಹಾಗೂ ಕಾರ್ಯಕ್ಷಮತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕೆ ಹೊರತು ಅವರ ಆಕ್ರಮಣಕಾರಿ ವರ್ತನೆಯ ಬಗ್ಗೆಯಲ್ಲ ಒಬ್ಬರಿಗೆ ಇಷ್ಟವಾದದ್ದು ಮತ್ತೊಬ್ಬರಿಗೆ ಇಷ್ಟವಾಗಬೇಕೆಂದೇನೂ ಇಲ್ಲ. ಟೀಂ ಇಂಡಿಯಾ ಗೆಲ್ಲುವುದಷ್ಟೇ ಮುಖ್ಯ ಎಂದು ಕಾರ್ಯಕ್ರಮವೊಂದರಲ್ಲಿ ಕಪಿಲ್ ದೇವ್ ಹೇಳಿದ್ದಾರೆ. 
SCROLL FOR NEXT