ಕ್ರಿಕೆಟ್

ಸಚಿನ್‌ರಂತ ಮಾಣಿಕ್ಯವನ್ನು ಸೃಷ್ಟಿಸಿದ್ದ ರಮಾಕಾಂತ್ ಅಚ್ರೇಕರ್ ವಿಧಿವಶ

Vishwanath S
ಮುಂಬೈ: ಭಾರತಕ್ಕೆ ಸಚಿನ್ ತೆಂಡೂಲ್ಕರ್ ನಂತ ಮಾಣಿಕ್ಯವನ್ನು ಸೃಷ್ಟಿಸಿ ಕೊಟ್ಟ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ಅವರು ಇಹಲೋಕ ತ್ಯಜಿಸಿದ್ದಾರೆ. 
87 ವರ್ಷ ವಯಸ್ಸಿನ ರಮಾಕಾಂತ್ ಅಚ್ರೇಕರ್ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಸಂಜೆ ವಿಧಿವಶರಾಗಿದ್ದಾರೆ ಎಂದು ಮೊಮ್ಮಗಳು ರಶ್ಮಿ ದಳ್ವಿ ತಿಳಿಸಿದ್ದಾರೆ.
ರಮಾಕಾಂತ್ ಅವರು ಒಂದೇ ಒಂದು ಫಸ್ಟ್ ಕ್ಲಾಸ್ ಪಂದ್ಯವನ್ನು ಆಡಿದ್ದರು. ಆದರೆ ಕ್ರಿಕೆಟ್ ನ ದಿಗ್ಗಜ ಸರ್ ಡೊನಾಲ್ಡ್ ಬ್ರಾಡ್ಮನ್ ನಂತರ ಸ್ಥಾನದಲ್ಲಿ ನಿಲ್ಲುವ ಸಚಿನ್ ತೆಂಡೂಲ್ಕರ್ ರನ್ನು ಸೃಷ್ಟಿಸಿದ ಖ್ಯಾತಿ ಅವರದ್ದಾಗಿದೆ. 
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ 18,426 ರನ್ ಬಾರಿಸಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿ ಅಗ್ರಸ್ಥಾನದಲ್ಲಿ ಸಚಿನ್ ನಿಂತಿದ್ದಾರೆ. 
ರಮಾಕಾಂತ್ ಅವರು ಸಚಿನ್ ರಂತೆ ವಿನೋದ್ ಕಾಂಬ್ಲೆ, ಪ್ರವೀಣ್ ಅಮ್ರೆ, ಸಮೀರ್ ದಿಘೇ, ಬಲ್ವಿಂದರ್ ಸಿಂಗ್ ಸಂಧು, ರಮೇಶ್ ಪವಾರ್, ಅಜಿಕ್ ಅಗರ್ಕಾರ್, ಚಂದ್ರಕಾಂತ್ ಪಂಡಿತ್ ಮತ್ತು ಟೀಂ ಇಂಡಿಯಾದ ಪ್ರಸಕ್ತ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ರಿಗೆ ಕೋಚ್ ಮಾಡಿದ್ದರು.
SCROLL FOR NEXT