ಕ್ರಿಕೆಟ್

ಆಸಿಸ್ ನೆಲದಲ್ಲಿ ಗರಿಷ್ಠ ರನ್ ಜೊತೆಯಾಟ; ದಾಖಲೆ ಬರೆದ ಪಂತ್-ಜಡೇಜಾ ಜೋಡಿ

Srinivasamurthy VN
ಸಿಡ್ನಿ: ಎಸ್ ಸಿಜಿ ಅಂಗಳದಲ್ಲಿ 2ನೇ ದಿನದಾಟದಲ್ಲಿ ಆಸಿಸ್ ಬೌಲರ್ ಗಳ ಬೆವರಿಳಿಸಿದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.
ಹೌದು.. ಆಸ್ಟ್ರೇಲಿಯಾ ನೆಲದಲ್ಲಿ 7ನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ ಗಳಿಸಿದ ಭರ್ಜರಿ 204 ರನ್ ಗಳ ಜೊತೆಯಾಟ ಇದೀಗ ದಾಖಲೆಯಾಗಿದ್ದು, 7ನೇ ವಿಕೆಟ್ ಜೊತೆಯಾಟದಲ್ಲಿ ಆಸಿಸ್ ನೆಲದಲ್ಲಿ ಗಳಿಸಿದ ಗರಿಷ್ಠ ಜೊತೆಯಾಟ ಎಂಬ ಕೀರ್ತಿಗೆ ಇವರಿಬ್ಬರೂ ಪಾತ್ರರಾಗಿದ್ದಾರೆ. ಪೂಜಾರಾ ನಿರ್ಗಮನದ ಬಳಿಕ ಪಂತ್ ಜೊತೆಗೂಡಿದ ರವೀಂದ್ರ ಜಡೇಜಾ ವೇಗವಾಗಿ ರನ್ ಕಲೆಹಾಕಿದರು.
71.05 ಸರಾಸರಿಯಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಜಡೇಜಾ 81 ರನ್ ಕಲೆಹಾಕಿದರೆ, ಅತ್ತ ಪಂತ್ ಕೂಡ 84.13 ಸರಾಸರಿಯಲ್ಲಿ 15 ಬೌಂಡರಿ ಹಾಗೂ 1ಸಿಕ್ಸರ್ ಸೇರಿದಂತೆ ಅಜೇಯ 159 ರನ್ ಪೇರಿಸಿದರು. ಅಂತೆಯೇ ಈ ಜೋಡಿ ಈ ಹಿಂದೆ ಪೂಜಾರ ಮತ್ತು ಸಾಹಾ ಅವರ ಹೆಸರಿನಲ್ಲಿದ್ದ 199 ರನ್ ಗಳ  ಜೊತೆಯಾಟದ ದಾಖಲೆಯನ್ನು ಹಿಂದಿಕ್ಕಿದೆ. 2017ರಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ 7ನೇ ವಿಕೆಟ್ ಜೊತೆಯಾಟದಲ್ಲಿ ಪೂಜಾರ ಮತ್ತು ಸಾಹಾ ಜೋಡಿ 199ರನ್ ಪೇರಿಸಿತ್ತು.
ಇನ್ನು 7ನೇ ವಿಕೆಟ್ ಜೊತೆಯಾಟದಲ್ಲಿ ಗರಿಷ್ಠ ರನ್ ಗಳಿಸಿದ ಹೆಗ್ಗಳಿಕೆ ವಿಂಡೀಸ್ ತಂಡದ ಡಿಎಸ್ ಅಟ್ಕಿನ್ಸನ್, ಸಿಸಿ ಡಿಪಿಯೆಝಾ ಅವರ ಹೆಸರಿನಲ್ಲಿದೆ. 1955ರಲ್ಲಿ ಈ ಜೋಡಿ ಬ್ರಿಡ್ಜ್ ಟೌನ್ ನಲ್ಲಿ ಆಸಿಸ್ ವಿರುದ್ಧ 347 ರನ್ ಗಳ ಜೊತೆಯಾಟವಾಡಿತ್ತು. 
SCROLL FOR NEXT