ಕ್ರಿಕೆಟ್

ನನಗೆ ಇನ್ನಷ್ಟು ಸಮಯಬೇಕು: ಕುಲದೀಪ್ ಯಾದವ್

Vishwanath S
ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಪ್ರಥಮ ಟೆಸ್ಟ್ ಪಂದ್ಯದಲ್ಲೇ 3 ವಿಕೆಟ್ ಗಳನ್ನು ಪಡೆದಿರುವ ಭಾರತದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ನಾನು ಟೆಸ್ಟ್ ಬೌಲರ್ ಆಗಿ ರೂಪುಗೊಳ್ಳಲು ನನಗೆ ಇನ್ನಷ್ಟು ಸಮಯಬೇಕು ಎಂದು ಹೇಳಿದ್ದಾರೆ. 
ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಆಡಿದ 24 ವರ್ಷದ ಕುಲದೀಪ್ ಯಾದವ್ ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಗಳನ್ನು ಪಡೆದಿದ್ದು ಭವಿಷ್ಯದ ಖಾಯಂ ಟೆಸ್ಟ್ ಬೌಲರ್ ಆಗುವ ಹಾದಿಯಲ್ಲಿದ್ದಾರೆ. ಇನ್ನು ತಮ್ಮ ಆಟದ ಕುರಿತಂತೆ ಮಾತನಾಡಿದ ಕುಲದೀಪ್ ಅವರು, ನಾನು ನಿಜ ಹೇಳುತ್ತೇನೆ ಆಸ್ಟ್ರೇಲಿಯಾ ಬ್ಯಾಟ್ ಮನ್ ಗಳಿಗಾಗಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಆದರೆ ವಿದೇಶಿ ನೆಲದಲ್ಲಿ ಇದು ನನ್ನ ಮೊದಲ ಪಂದ್ಯವಾಗಿದ್ದರಿಂದ ಕೊಂಚ ಹೆದರಿದ್ದೇನೆ ಅಷ್ಟೇ ಎಂದರು. 
ಯೋಗ್ಯವಾದ ಸಾಕಷ್ಟು ಜ್ಞಾನವನ್ನು ಹೊಂದಲು ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ನಾನು ಸುಧಾರಿಸಲು ಬಹುಶಃ ಸ್ವಲ್ಪ ಸಮಯ ಬೇಕಾಗುತ್ತದೆ. ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದರೆ ಸುಧಾರಿಸಬಹುದು ಎಂದರು. 
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಪೇರಿಸಿದೆ. ಇನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಆಡುತ್ತಿದ್ದು 6 ವಿಕೆಟ್ ನಷ್ಟಕ್ಕೆ 236 ರನ್ ಪೇರಿಸಿದೆ.
SCROLL FOR NEXT