ಕ್ರಿಕೆಟ್

4ನೇ ಟೆಸ್ಟ್: 300 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್, ಫಾಲೋ ಆನ್ ಹೇರಿದ ಭಾರತ

Srinivasamurthy VN
ಸಿಡ್ನಿ: ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನ ನಾಲ್ಕನೇ ದಿನದಾಟದ ವೇಳೆ ಆತಿಥೇಯ ಆಸ್ಟ್ರೇಲಿಯಾ 300 ರನ್ ಗಳಿಗೆ ಆಲೌಟ್ ಆಗಿದ್ದು, ಟಿಮ್ ಪೈನ್ ಪಡೆ ಮೇಲೆ ಭಾರತ ಫಾಲೋ ಆನ್ ಹೇರಿದೆ.
ಮಳೆ ಮತ್ತು ಬೆಳಕಿನ ಸಮಸ್ಯೆಯ ನಡುವೆಯೂ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ತತ್ತರಿಸಿ ಹೋದ ಆಸ್ಟ್ರೇಲಿಯಾ ತಂಡ ಕೇವಲ 300 ರನ್ ಗಳಿಗೆ ಆಲೌಟ್ ಆಯಿತು. ನಿನ್ನೆ ದಿನದಾಟದ ಅಂತ್ಯಕ್ಕೆ 236 ರನ್ ಗಳಿಸಿತ್ತು. ಇಂದು ಮತ್ತೆ 64 ರನ್ ಗಳನ್ನು ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತದ ವಿರುದ್ಧ ಆಸಿಸ್ ತಂಡ 322 ರನ್ ಗಳ ಭಾರಿ ಹಿನ್ನಡೆ ಅನುಭವಿಸಿತು.
ಇನ್ನು ಭಾರತದ ಪರ ಕುಲದೀಪ್ ಯಾದವ್ 5, ಜಡೇಜಾ ಹಾಗೂ ಮಹಮದ್ ಶಮಿ ತಲಾ 2 ಮತ್ತು ಬುಮ್ರಾ 1 ವಿಕೆಟ್ ಪಡೆದು ಮಿಂಚಿದರು. ಇನ್ನು 322 ರನ್ ಗಳ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಮೇಲೆ ಫಾಲೋ ಆನ್ ಹೇರಲಾಗಿದ್ದು. ಇತ್ತೀಚಿನ ವರದಿಗಳು ಬಂದಾಗ ಆಸಿಸ್ ತಂಡ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಮಂದಬೆಳಕಿನ ಸಮಸ್ಯೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಗಿದೆ.
SCROLL FOR NEXT