ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ಎ ಗುಂಪಿನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಮಧ್ಯಪ್ರದೇಶ ದಿಢೀರ್ ಕುಸಿತ ಕಂಡಿದ್ದು 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ತಂಡ ಕೊನೆಗೆ 35 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಮಧ್ಯಪ್ರದೇಶದ ತಂಡದ ಕೊನೆಯ 7 ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಆಂಧ್ರಪ್ರದೇಶ ಮೊದಲ ಇನ್ನಿಂಗ್ಸ್ ನಲ್ಲಿ 132 ರನ್ ಗಳಿಗೆ ಆಲೌಟ್ ಆಗಿತ್ತು. ಮಧ್ಯಪ್ರದೇಶ ಕೇವಲ 91 ರನ್ ಗಳಿಸಿ ಆಲೌಟ್ ಆಗಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ನಲ್ಲಿ ಆಂಧ್ರ ಭರ್ಜರಿ ಬ್ಯಾಟಿಂಗ್ ಮಾಡಿ 301 ರನ್ ಕಲೆ ಹಾಕಿತ್ತು.
342 ರನ್ ಗಳ ಸವಾಲು ಬೆನ್ನಟ್ಟಿದ ಮಧ್ಯಪ್ರದೇಶ ಕೇವಲ 35 ರನ್ ಗಳಿಗೆ ಆಲೌಟ್ ಆಗಿದ್ದು 307 ರನ್ ಗಳಿಂದ ಹೀನಾಯ ಸೋಲು ಕಂಡಿದೆ. ಮಧ್ಯಪ್ರದೇಶ ತನ್ನ ಕೊನೆ 7 ವಿಕೆಟ್ ಗಳನ್ನು ಕೇವಲ 23 ಎಸೆತಗಳಲ್ಲಿ ಕಳೆದುಕೊಂಡಿತು.
ಆಂಧ್ರಪ್ರದೇಶದ ವಿರುದ್ಧ ಮಧ್ಯಪ್ರದೇಶ ಸೋಲು ಕಂಡಿತ್ತು ಪರಿಣಾಮ ಬರೋಡಾ ವಿರುದ್ಧ ಸೋಲು ಕಂಡಿದ್ದರೂ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics