ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್
ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಅವರು ಸೋಮವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಅಸಭ್ಯ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತು ಶಿಕ್ಷೆ ಎದುರಿಸುತ್ತಿರುವ ಈ ಇಬ್ಬರು ಆಟಗಾರರಿಗೆ ಬಿಸಿಸಿಐ ನೋಟಿಸ್ ಜಾರಿಮಾಡಿತ್ತು.
ಇಂದು ಬಿಸಿಸಿಐ ನೋಟಿಸ್ ಗೆ ಉತ್ತರಿಸಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರು ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ತಾವು ನೀಡಿದ್ದ ಹೇಳಿಕೆಗಳಿಗೆ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಬೇಷರತ್ ಕ್ಷಮೆಗೆ ತೃಪ್ತರಾಗದ ಬಿಸಿಸಿಐನ 10 ಸದಸ್ಯರು ಈ ಸಂಬಂಧ ವಿಶೇಷ ಸಾಮಾನ್ಯ ಸಭೆ ಕರೆದು, ಪ್ರಕರಣ ಕುರಿತ ತನಿಖೆಗೆ ಒಂಬುಡ್ಸ್ ಮನ್ ನೇಮಕ ಮಾಡುವಂತೆ ಕೋರಿದ್ದಾರೆ.
ಇನ್ನು ಸಿಒಎ ಮುಖ್ಯಸ್ಶ ವಿನೋದ್ ರೈ ಅವರು, ಕ್ರಿಕೆಟಿಗರ ತಪ್ಪನ್ನು ಸರಿಪಡಿಸಬೇಕು, ಅದರ ಹೊರತು ಬಿಸಿಸಿಐ ಇಬ್ಬರು ಯುವಕ್ರಿಕೆಟಿಗರ ಭವಿಷ್ಯವನ್ನು ಕೊನೆಗೊಳಿಸಬಾರದು ಎಂದು ಹೇಳಿದ್ದಾರೆ.
ವಿಶ್ವಕಪ್ ಕ್ರಿಕೆಟ್‌ಗೆ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈಗಲೇ ಇಬ್ಬರು ಯುವ ಆಟಗಾರರ ಪ್ರಕರಣವನ್ನು ಬಿಸಿಸಿಐ ಶೀಘ್ರ ಇತ್ಯರ್ಥಪಡಿಸದೇ ಹೋದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಬಿಸಿಸಿಐ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಗಳು ಒತ್ತಾಯಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics