ಕ್ರಿಕೆಟ್

ಕೊಹ್ಲಿಯ ಶತಕ, ಧೋನಿಯ ಮ್ಯಾಚ್‌ ಫಿನಿಷಿಂಗ್ ಪುಳಕ: 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

Srinivas Rao BV
ಅಡಿಲೇಡ್: ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿದೆ. 
ಆಸ್ಟ್ರೇಲಿಯಾ ನೀಡಿದ್ದ 298 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಗೆಲುವಿಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಆಧಾರವಾಗಿ ನಿಂತರು. 
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 39 ನೇ ಏಕದಿನ ಶತಕ ಸಾಧನೆ  ಮಾಡಿದರೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗ್ರೆಟ್ ಮ್ಯಾಚ್ ಫಿನಿಷರ್ ಶೈಲಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 
ಆಸ್ಟ್ರೇಲಿಯಾ 49.6 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 298 ರನ್ ಗಳನ್ನು ಗಳಿಸಿ ಭಾರತಕ್ಕೆ 299 ರನ್ ಗಳ ಗುರಿ ನೀಡಿತ್ತು. ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 52 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರೆ ಶಿಖರ್ ಧವನ್ 28 ಎಸೆತಗಳಲ್ಲಿ 32 ರನ್ ಗಳ್;ಇಸಿ ನಿರ್ಗಮಿಸಿದರು, ನಂತರ ಕ್ರೀಸ್ ಗೆ ಬಂದ ಕೊಹ್ಲಿ 112 ಎಸೆತಗಳಲ್ಲಿ 104 ರನ್ ಪೇರಿಸಿದರು. ಆದರೆ ಅಂಬಟಿ ರಾಯುಡು 36 ಎಸೆತಗಳಲ್ಲಿ 24 ರನ್ ಗಳಿಸಿ ನಿರ್ಮಗಿಸಿದರು, ನಂತರ ಕೊಹ್ಲಿಗೆ ಉತ್ತಮ ಜೊತೆಯಾಟ ನೀಡಿದ ಧೋನಿ 53 ಎಸೆತಗಳಲ್ಲಿ 55 ರನ್ ಗಳಿಸಿ ಅಜೇಯರಾಗಿ ಉಳಿದು ಗ್ರೇಟ್ ಮ್ಯಾಚ್ ಫಿನಿಷರ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು. 
ಕಳೆದ ಪಂದ್ಯದಲ್ಲಿ ಧೋನಿಯ ನಿಧಾನಗತಿ ಬ್ಯಾಟಿಂಗ್ ನಿಂದಲೇ ಭಾರತ ಸೋತಿತ್ತು ಎಂಬ ಟೀಕೆಗೆ ಈ ಪಂದ್ಯದಲ್ಲಿ  ಧೋನಿ  ಬ್ಯಾಟ್ ನಿಂದಲೇ ಸೂಕ್ತ ಉತ್ತರ ನೀಡಿದಂತಾಗಿದೆ. 
SCROLL FOR NEXT