ಕ್ರಿಕೆಟ್

ಅಡಿಲೇಡ್ ನಲ್ಲಿ 'ವಿರಾಟ್' ರೂಪ ತೋರಿದ ಕೊಹ್ಲಿ: 39ನೇ ಏಕದಿನ ಶತಕ ಸಾಧನೆ!

Raghavendra Adiga
ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಅಸೀಸ್-ಬಾರತ ಇವಿರುದ್ಧ ಎರಡಣೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 39ನೇ ಶತಕ ಸಿಡಿಸಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ಕೊಹ್ಲಿ ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ  43ನೇ ಓವರ್ ವೇಳೆಗೆ 108 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ ದೇಶಾದ್ಯಂತ ಭಾರತೀಯರು ಆಚರಿಸುತ್ತಿರುವ ಮಕರ ಸಂಕ್ರಮಣ ಹಬ್ಬಕ್ಕಾಗಿ ದೇಶವಾಸಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
ಇದು ಕೊಹ್ಲಿ ಆಸ್ಟ್ರೇಲಿಯಾದವಿರುದ್ಧ ಸಿಡಿಸಿದ ಐದನೇ ಶತಕವಾಗಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯವರ 64ನೇ ಶತಕ ಇದಾಗಿದೆ.ಒಟ್ಟು 25 ಟೆಸ್ಟ್ ಶತಕಗಳು, 39 ಏಕದಿನ ಶತಕಗಳು ಇದರಲ್ಲಿ ಸೇರಿದೆ.
ದ್ವಿತೀಯ ಏಕದಿನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಒಂಬತ್ತು ವಿಕೆಟ್ ನಷ್ಟಕ್ಕೆ 298 ರನ್ ಗ:ಳಿಸಿದ್ದು ಭಾರತ ಗೆಲ್ಲಲು 299 ಗುರಿ ನೀಡಿದೆ. ಇತ್ತೀಚಿನ ವರದಿ ಬಂದಾಗ ಭಾರತ 274/4 ರನ್ ಕಲೆ ಹಾಕಿತ್ತು.
SCROLL FOR NEXT