ವಿರಾಟ್ ಕೊಹ್ಲಿ, ಫೆಡರರ್, ಅನುಷ್ಕಾ ಶರ್ಮಾ,
ಮೆಲ್ಬರ್ನ್: ಸತತ ಪಂದ್ಯಗಳನ್ನು ಆಡಿ ದಣಿದಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ , ಇಂದು ಆಸ್ಟ್ರೇಲಿಯಾ ಟೆನಿಸ್ ಟೂರ್ನಿಯ ಪಂದ್ಯಗಳನ್ನು ಪತ್ನಿ ಅನುಷ್ಕಾ ಜೊತೆಗೆ ವೀಕ್ಷಿಸಿದ್ದಾರೆ. ಈ ವೇಳೆ ಟೆನಿಸ್ ತಾರೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ಬಳಿಕ ಸರಣಿ ಗೆದ್ದ ಖುಷಿಯಲ್ಲಿರುವ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಜೊತೆಗೆ ಸುತ್ತಾಟ ನಡೆಸಿದ್ದಾರೆ.
ಅನುಷ್ಕಾ ಮತ್ತು ವಿರಾಟ್ ಕೊಹ್ಲಿ, ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಡೆನಿಶ್ ಶಪೊವಲೋವ್ ಹಾಗೂ ಅಮೆರಿಕಾದ ಸೆರೆನಾ ವಿಲಿಯಮ್ಸ್ ಮತ್ತು ಡಯಾನ ಯೆಸ್ಟೈಮ್ ಸ್ಕಾ ನಡುವಣ ಮೂರನೇ ಸುತ್ತಿನ ಹೋರಾಟ ಪಂದ್ಯಗಳನ್ನು ವೀಕ್ಷಿಸಿದ್ದಾರೆ.
ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಡೆನಿಸ್ ಶಪೊವೊಲೋವ್ ವಿರುದ್ಧ ಗೆಲುವು ಸಾಧಿಸಿದ್ದರೆ, ಮಹಿಳೆಯರ ಸಿಂಗಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಆಸ್ಟ್ರೇಲಿಯಾ ಓಪನ್ ಪಂದ್ಯಗಳನ್ನು ನೋಡುತ್ತಾ ದಿನ ಕಳೆದಿದ್ದು ಖುಷಿ ನೀಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದ್ದೇನೆ. ಈ ಕ್ಷಣ ಸದಾ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics