ಕ್ರಿಕೆಟ್

ಮತ್ತೆ ದಾಖಲೆ ಬರೆದ ಕೊಹ್ಲಿ-ರೋ'ಹಿಟ್'ಜೋಡಿ

Srinivasamurthy VN
ಬೇ ಓವಲ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಮತ್ತೊಂದು ದಾಖಲೆ ಬರೆದಿದ್ದು, ಅತೀ ಹೆಚ್ಚು ಬಾರಿ 100 ಅಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೇರಿದೆ.
ಹೌದು.. ಇಂದು ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಬೌಲರ್ ಗಳ ಬೆಂಡೆತ್ತಿದ ಈ ಜೋಡಿ, 113 ರನ್ ಗಳ ಜೊತೆಯಾಟವಾಡಿತು. ಈ ಜೋಡಿಗೆ ಇದು 16ನೇ ಶತಕದ ಜೊತೆಯಾಟವಾಗಿದ್ದು,. ಆ ಮೂಲಕ ಈ ಜೋಡಿ ಆಸ್ಟ್ರೇಲಿಯಾಗ ಮ್ಯಾಥ್ಯೂ ಹೇಡನ್ ಮತ್ತು ಗಿಲ್ ಕ್ರಿಸ್ಟ್ ಹೆಸರಲ್ಲಿದ್ದ ದಾಖಲೆಯನ್ನು ಸರಿಗಟ್ಟಿದೆ. ಅಂತೆಯೇ ಶ್ರೀಲಂಕಾದ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ, ವಿಂಡೀಸ್ ನ ಕ್ರಿಕೆಟ್ ದಂತಕಥೆಗಳಾದ ಗ್ರೀನಿಜ್-ಡಿಎಲ್ ಹೇಯ್ನ್ಸ್ ಅವರ (15 ಬಾರಿ) ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಅಲ್ಲದೆ ಅತೀ ಹೆಚ್ಚು ಬಾರಿ 100ಕ್ಕೂ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಜೋಡಿಗಳ ಪೈಕಿ ಈ ಜೋಡಿ 3ನೇ ಸ್ಥಾನಕ್ಕೇರಿದೆ. ಇನ್ನು ಈ ಪಟ್ಟಿಯಲ್ಲಿ ಅತೀ ಹೆಚ್ಚು ಬಾರಿ 100ಕ್ಕೂ ಅಧಿಕ ರನ್ ಜೊತೆಯಾಟವಾಡಿದ ಜೋಡಿಗಳ ಪೈಕಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ ಅಗ್ರ ಸ್ಥಾನದಲ್ಲಿದ್ದು, ಈ ಜೋಡಿ 26 ಬಾರಿ ಈ ಸಾಧನೆ ಮಾಡಿದೆ. 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಮತ್ತು ಸಂಗಕ್ಕಾರ ಜೋಡಿ 20 ಬಾರಿ ಈ ಸಾಧನೆ ಮಾಡಿದೆ.
SCROLL FOR NEXT