ಕ್ರಿಕೆಟ್

ಪೃಥ್ವಿ ಶಾ ಅದ್ಭುತ ಆಟಗಾರ, ಶುಭ್ ಮನ್ ಗಿಲ್ ಮುಂದೆ ನಾನೇನೂ ಅಲ್ಲ: ಕಿರಿಯರ ಆಟ ಶ್ಲಾಘಿಸಿದ ಕ್ಯಾಪ್ಟನ್ ಕೊಹ್ಲಿ

Srinivasamurthy VN
ಬೇ ಓವಲ್: ಯಶಸ್ವೀ ಆಸಿಸ್ ಪ್ರವಾಸದ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನೂ ಗೆದ್ದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಿರಿಯ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
ಕಿವೀಸ್ ವಿರುದ್ಧದ ಮೂರನೇ ಪಂದ್ಯದ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ, ಉದಯೋನ್ಮುಖ ಆಟಗಾರನಾದ ಶುಭ್​​ಮನ್​ ಗಿಲ್​ರನ್ನ ಹಾಡಿ ಹೊಗಳಿದ್ದಾರೆ.
ಪ್ರಮುಖವಾಗಿ ಶುಭ್ ಮನ್​ ಗಿಲ್​ ಹಾಗೂ ಪೃಥ್ವಿ ಶಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ, 'ನಮ್ಮ ತಂಡ ಅತ್ಯುತ್ತಮ ಪ್ರತಿಭೆಗಳನ್ನ ಹೊಂದಿದೆ. ಪೃಥ್ವಿ ಶಾ ಒಬ್ಬ ಪ್ರತಿಭಾವಂತ ಆಟಗಾರನಾಗಿದ್ದು ಅವಕಾಶಗಳನ್ನ ಬಾಚಿಕೊಳ್ಳುತ್ತಿದ್ದಾರೆ. ಅಂತೆಯೇ ಶುಭ್ ಮನ್​ ಗಿಲ್​ ಕೂಡ ಒಬ್ಬ ಅತ್ಯುತ್ತಮ ಆಟಗಾರ. 19 ವರ್ಷಕ್ಕೆ ಇವರು ಈ ಮಟ್ಟಕ್ಕೇರಿದ್ದಾರೆ ಎಂದರೆ ಭವಿಷ್ಯದಲ್ಲಿ ಖಂಡಿತಾ ಭಾರತ ತಂಡದ ಪ್ರಮುಖ ಅಸ್ತ್ರಗಳಾಗುತ್ತಾರೆ. ನಾನು 19 ವರ್ಷದವನಿದ್ದಾಗ ಅವರ ರೀತಿಯಲ್ಲಿ ಆಡುತ್ತಿರಲಿಲ್ಲ. ಅವರ ನೆಟ್ ಪ್ರಾಕ್ಟಿಸ್​ ನೋಡಿ ನನಗೆ ವಾವ್ ಎನಿಸುತ್ತಿದೆ. ಅವರಿಗೆ ಹೋಲಿಸಿದರೇ, ನಾನು ಆ ವಯಸ್ಸಿನಲ್ಲಿ, 10 ಪರ್ಸೆಂಟ್ ನಷ್ಟೂ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
SCROLL FOR NEXT