ನೇಪಾಳ ತಂಡ 
ಕ್ರಿಕೆಟ್

ನಾಯಕನ ಚೊಚ್ಚಲ ಶತಕದ ನೆರವು, ಚೊಚ್ಚಲ ಏಕದಿನ ಸರಣಿ ಗೆದ್ದ 'ಕ್ರಿಕೆಟ್ ಶಿಶು' ನೇಪಾಳ!

ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಿರುವ ಯುಎಇ ಹಾಗೂ ನೇಪಾಳ ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ನೇಪಾಳ ಚೊಚ್ಚಲ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ದುಬೈ: ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಿರುವ ಯುಎಇ ಹಾಗೂ ನೇಪಾಳ ತಂಡಗಳ ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ನೇಪಾಳ ಚೊಚ್ಚಲ ಸರಣಿಯನ್ನು ಕೈವಶ ಮಾಡಿಕೊಂಡಿದೆ. 
ದುಬೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಯುಎಇ ತಂಡ 6 ವಿಕೆಟ್ ನಷ್ಟಕ್ಕೆ 254 ಗಳಿಸಿತ್ತು. 255 ರನ್ ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡದ ಪರ ನಾಯಕ ಪರಾಸ್ ಖಾಡ್ಕ(115) ಶತಕ ಸಿಡಿಸಿದ್ದ ನೇಪಾಳ 44.4 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 255 ರನ್ ಪೇರಿಸುವ ಮೂಲಕ ಗೆಲುವಿನ ನಗೆ ಬೀರಿತು.
ಯುಎಇ ಪರ ರಿಜ್ವಾನ್ 45, ಶೈಮನ್ ಅನ್ವರ್ 87, ಮೊಹಮ್ಮದ್ ಬೊತಾ ಅಜೇಯ 59 ರನ್ ಪೇರಿಸಿದ್ದಾರೆ. 
ನೇಪಾಳ ಪರ ಬೌಲಿಂಗ್ ನಲ್ಲಿ ಕರಣ್, ಖಾಡ್ಕ ತಲಾ 2 ವಿಕೆಟ್ ಪಡೆದರೆ, ಸಂಪಾಲ್ ಕಮಿ ಮತ್ತು ಲಮಿಚ್ಚನೆ ತಲಾ 1 ವಿಕೆಟ್ ಪಡೆದಿದ್ದಾರೆ. 
ನೇಪಾಳ ಪರ ಬ್ಯಾಟಿಂಗ್ ನಲ್ಲಿ ಮಲ್ಲ 31, ಪರಾಸ್ ಖಾಡ್ಕ 115, ಆರೀಫ್ ಶೇಕ್ ಅಜೇಯ 21 ಮತ್ತು ಸೊಂಪಾಲ್ ಕಮಿ ಅಜೇಯ 26 ರನ್ ಸಿಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಶಾಸಕರಿಗೆ 4 ವಿಐಪಿ ಟಿಕೆಟ್ ಖಾತ್ರಿಗೆ ಸ್ಪೀಕರ್ ಯುಟಿ ಖಾದರ್ ನಿರ್ದೇಶನ!

Airbnb ಮೂಲಕ ಪೆಂಟ್‌ಹೌಸ್ ಬಾಡಿಗೆ ವಿವಾದ: ಜನರ ಮೇಲೆ ಕಾರು ಹತ್ತಿಸಿದ ತಂದೆ-ಮಗ; ಮಹಿಳಾ ಟೆಕ್ಕಿ ಸಾವು, ಭೀಕರ ದೃಶ್ಯ!

ನನ್ನ ಬಿಡಪ್ಪ, ನಿನಗೆ ತಾಕತ್ತಿದ್ದರೆ ಮೋದಿಗೆ ಥೂ ಅನ್ನು ನೋಡೋಣ: ಸುನೀಲ್ ಕುಮಾರ್‌ಗೆ ಸಿದ್ದರಾಮಯ್ಯ ಸವಾಲು, Video!

ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಸಿದ್ದ ಇರಾನ್‌ನ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾನನ್ನು ಹೊಡೆದುರುಳಿಸಿದ ಇಸ್ರೇಲ್!

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, Muslim ಶಾಸಕರ ಮನವೊಲಿಕೆಗೂ ಜಗ್ಗದ ಸಾದಿಕ್ ಪೈಲ್ವಾನ್!

SCROLL FOR NEXT