ಕ್ರಿಕೆಟ್

4ನೇ ಏಕದಿನ: ಕ್ರಿಕೆಟ್ ಇತಿಹಾಸದಲ್ಲೇ ನ್ಯೂಜಿಲೆಂಡ್ ಗೆ ಅತೀ ದೊಡ್ಡ ಗೆಲುವು!

Srinivasamurthy VN
ಹ್ಯಾಮಿಲ್ಟನ್: ಹ್ಯಾಮಿಲ್ಟನ್ ನಲ್ಲಿ ನಡೆದ ಭಾರತದ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಾಖಲೆಯ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ಪಡೆ ಟ್ರೆಂಟ್ ಬೌಲ್ಟ್ ( 5 ವಿಕೆಟ್) ಮತ್ತು ಗ್ರಾಂಡ್ ಹೋಮ್ (3 ವಿಕೆಟ್) ಅವರ ಅಮೋಘ ಬೌಲಿಂಗ್ ನೆರವಿನಿಂದಾಗಿ ಭಾರತ ತಂಡವನ್ನು ಕೇವಲ 92 ರನ್ ಗಳಿಗೇ ಆಲೌಟ್ ಮಾಡಿತು. ಬಳಿಕ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 14.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ 8 ವಿಕೆಟ್ ಗಳ ಗೆಲುವು ಸಾಧಿಸಿತು.
ಇನ್ನು ಹಾಲಿ ಗೆಲುವು ಭಾರತದ ವಿರುದ್ಧ ನ್ಯೂಜಿಲೆಂಡ್ ಸಾಧಿಸಿದ ಅತೀ ದೊಡ್ಡ ಗೆಲುವು ಇದಾಗಿದೆ. ಹೌದು... ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇನ್ನೂ 212 ಎಸೆತಗಳು ಬಾಕಿ ಇರುವಂತೆ ಗುರಿ ಮುಟ್ಟಿ ಗೆಲುವಿನ ನಗೆ ಸೇರಿತು. ಇದಕ್ಕೂ ಮೊದಲು 2010ರಲ್ಲಿ ಶ್ರೀಲಂಕಾ ವಿರುದ್ಧ ಡಂಬೂಲಾದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 209 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತ್ತು. 2012ರಲ್ಲಿ ಹಂಬಟೋಟಾದಲ್ಲಿ ಶ್ರೀಲಂಕಾ ವಿರುದ್ಧ 181 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತ್ತು.
ಭಾರತದ 7ನೇ ಕಳಪೆ ಮೊತ್ತ
ಇನ್ನು ಇಂದು ನ್ಯೂಜಿಲೆಂಡ್ ನಲ್ಲಿ ಭಾರತ ಗಳಿಸಿದ 92 ರನ್ ಗಳ ಮೊತ್ತ ಭಾರತ ತಂಡದ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ  7ನೇ ಕನಿಷ್ಠ ಮೊತ್ತವೆಂದು ದಾಖಲಾಗಿದೆ. ಈ ಹಿಂದೆ 2000ದಲ್ಲಿ ಶ್ರೀಲಂಕಾ ವಿರುದ್ಧ ಶಾರ್ಜಾದಲ್ಲಿ 54  ರನ್ ಗಳಿಗೆ ಆಲೌಟ್ ಆಗಿತ್ತು. ಇದು ಭಾರತ ತಂಡದ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತವೆಂದು ದಾಖಲಾಗಿದೆ.
SCROLL FOR NEXT