ಕ್ರಿಕೆಟ್

ವಿಶ್ವಕಪ್: ಭಾರತ ಸೋಲಿಗೆ ಕಿತ್ತಳೆ ಬಣ್ಣದ ಜೆರ್ಸಿ ದೂಷಿಸಿದ ಮೆಹಬೂಬಾ

Nagaraja AB
ಜಮ್ಮು-ಕಾಶ್ಮೀರ: ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ  ಕಿತ್ತಲೆ ಬಣ್ಣದ ಹೊಸ ಜೆರ್ಸಿಯನ್ನು ಜಮ್ಮು- ಕಾಶ್ಮೀರ  ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ದೂಷಿಸಿದ್ದಾರೆ.
ನನನ್ನು ಮೂಢನಂಬಿಕೆವಾದಿ ಎಂದು ಕರೆಯಿರಿ ಆದರೆ, ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಗೆಲುವಿನ ಹಾದಿಯನ್ನು  ಜೆರ್ಸಿ  ಕೊನೆಗೊಳಿಸಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷಗಳ ತೀವ್ರ ಟೀಕೆಗಳ ನಡುವೆಯೂ ಐಸಿಸಿ ಅನುಮತಿ ಮೇರೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ಕಿತ್ತಲೆ ಬಣ್ಣದ ಜೆರ್ಸಿ  ಧರಿಸಿ ಪಂದ್ಯವನ್ನಾಡಿದ್ದರು. 
ಕಿತ್ತಲೆ ಬಣ್ಣದ ನೂತನ ಜೆರ್ಸಿಯನ್ನು ಎರಡನೇ ಜೆರ್ಸಿಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.
ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ವಿರುದ್ಧ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಈ ಮೂಲಕ 1992ರ ಬಳಿಕ ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ
SCROLL FOR NEXT