ಕ್ರಿಕೆಟ್

ವಿಶ್ವಕಪ್ 2019: 4ನೇ ಶತಕ ಸಿಡಿಸಿ ರೋ'ಹಿಟ್' ಶರ್ಮಾ ದಾಖಲೆ, ಸಂಗಕ್ಕಾರ ರೆಕಾರ್ಡ್ ಬ್ರೇಕ್!

Vishwanath S
ಲಂಡನ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಆಕರ್ಷಕ ಶತಕ ಸಿಡಿಸಿದ್ದಾರೆ. 
ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಲ್ಕನೇ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಸತತ ಮೂರನೇ ಶತಕ ಸಿಡಿಸಿದ ಖ್ಯಾತಿ ರೋಹಿತ್ ಶರ್ಮಾದು. ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 5 ಸಿಕ್ಸರ್ ಮತ್ತು 7 ಬೌಂಡರಿ ಸೇರಿದಂತೆ 92 ಎಸೆತದಲ್ಲಿ 104 ರನ್ ಬಾರಿಸಿದ್ದಾರೆ.
2015ರಲ್ಲಿ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ಟೂರ್ನಿಯಲ್ಲಿ ಒಟ್ಟಾರೆ 4 ಶತಕ ಸಿಡಿಸಿದ್ದರು. ಈ ದಾಖಲೆಯನ್ನು ರೋಹಿತ್ ಶರ್ಮಾ ಬ್ರೇಕ್ ಮಾಡಿದ್ದಾರೆ.
2019ರ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಶತಕ ಪಟ್ಟಿ:
* ಆಫ್ರಿಕಾ ವಿರುದ್ಧ ಅಜೇಯ 122
* ಪಾಕಿಸ್ತಾನ ವಿರುದ್ಧ 140
* ಇಂಗ್ಲೆಂಡ್ 102
* ಬಾಂಗ್ಲಾದೇಶ ವಿರುದ್ಧ 104
SCROLL FOR NEXT