ಕ್ರಿಕೆಟ್

ಕ್ಯಾಮೆರಾಗಳಷ್ಟೇ ಅಲ್ಲ.. ಟೀಂ ಇಂಡಿಯಾ ನಾಯಕ ಕೊಹ್ಲಿ ಗಮನವನ್ನೂ ಸೆಳೆದ ಅಜ್ಜಿ.. ಮಾಡಿದ್ದೇನು?

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ಯಾಮೆರಾಗಳ ಗಮನ ಸೆಳೆದಿದ್ದ ಸುಮಾರು 87 ವರ್ಷದ ಅಜ್ದಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಮನವನ್ನೂ ಸೆಳೆದಿದ್ದಾರೆ.
ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಆಟಗಾರರ ಪ್ರದರ್ಶನಕ್ಕಿಂತ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು  ಕ್ಯಾಮೆರಾಗಳ ಗಮನ ಸೆಳೆದಿದ್ದ 87 ವರ್ಷ ವಯಸ್ಸಿನ ಚಾರುಲತಾ ಪಟೇಲ್ ಎಂಬ ಅಜ್ಜಿ ಇದೀಗ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ. 
ಪಂದ್ಯದ ವೇಳೆ ಭಾರತ ತಂಡವನ್ನು ತಮ್ಮದೇ ಆದ ಶೈಲಿಯಲ್ಲಿ ಹುರಿದುಂಬಿಸುತ್ತಿದ್ದ ಚಾರುಲತಾ ಪಟೇಲ್ ಅವರು, ಪಂದ್ಯದ ನೇರ ಪ್ರಸಾರ ಮಾಡುತ್ತಿದ್ದ ಕ್ಯಾಮೆರಾಗಳ ಹಾಟ್ ಫೇವರಿಟ್ ಆಗಿದ್ದರು. ಪ್ರತೀ ಬಾರಿ ಓವರ್ ಮುಕ್ತಾಯವಾದಾಗಲೂ ಕ್ಯಾಮೆರಾಗಳ ಕಣ್ಣು ನೇರವಾಗಿ ಅಜ್ಜಿಯತ್ತಲೇ ಹೋಗುತ್ತಿದ್ದು. ಭಾರತೀಯ ಆಟಗಾರರು ಪ್ರತೀ ಬಾರಿ ಬೌಂಡರಿ ಬಾರಿಸಿದಾಗಲೂ ಅಜ್ಜಿ ವೀಲ್ ಚೇರ್ ನಲ್ಲಿ ಕುಳಿತೇ ಕೂಗಿ ಭಾರತ ತಂಡದ ಆಟಗಾರರಿಗೆ ಪ್ರೋತ್ಯಾಹ ತುಂಬುತ್ತಿದ್ದರು. ಈ ಇಳಿ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಂತಿದ್ದ ಅಜ್ಜಿ ಅಕ್ಷರಶಃ ಕ್ಯಾಮೆರಾಗಳ ಕೇಂದ್ರ ಬಿಂದುವಾಗಿದ್ದರು.
ಕೇವಲ ಕ್ಯಾಮೆರಾಗಳು ಮಾತ್ರವಲ್ಲ.. ಈ ಅಜ್ಜಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಮನವನ್ನೂ ಸೆಳೆದಿದ್ದು, ಪಂದ್ಯ ಮುಕ್ತಾಯವಾಗುತ್ತಲೇ ಅಜ್ಜಿ ಇದ್ದ ಪ್ರೇಕ್ಷಕರ ಗ್ಯಾಲರಿಯತ್ತ ಓಡಿ ಬಂದ ಕೊಹ್ಲಿ ಅಜ್ಜಿಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಅಜ್ಜಿ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಹರಿಸಿದ್ದು, ಮುಂದಿನ ಪಂದ್ಯಗಳನ್ನೂ ಗೆದ್ದು ಭಾರತಕ್ಕೆ ಮತ್ತೊಂಜು ವಿಶ್ವಕಪ್ ತಂದುಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಸ್ವತಃ ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಅವರ ಆಶೀರ್ವಾದ ಸಿಕ್ಕಿದ್ದ ನನ್ನ ಅದೃಷ್ಟ.. ಅವರಂತಹ ಅಭಿಮಾನಿಗಳೇ ನಮ್ಮ ಬಲ ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT