ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ರನೌಟ್ ಆಗಿದ್ದು ಈ ವೇಳೆ ಮಾರ್ಕ್ ಮಗುವಿನಂತೆ ಬೆರಳು ಚೀಪಿದ ಘಟನೆ ನಡೆದಿದೆ.
ಮಾರ್ಕ್ ವುಡ್ ಬೌಲಿಂಗ್ ನಲ್ಲಿ ರಾಸ್ ಟೇಲರ್ ನಾನ್ ಸ್ಟ್ರೈಕ್ ಕಡೆ ಚೆಂಡನ್ನು ಬಾರಿಸಿದರು. ಈ ವೇಳೆ ಮಾರ್ಕ್ ವುಡ್ ಕೈಯನ್ನು ಚಾಚಿ ಚೆಂಡನ್ನು ಹಿಡಿಯಲು ಮುಂದಾದರು ಆದರೆ ಬೆರಳ ತುದಿಗೆ ತಗುಲಿದ ಚೆಂಡು ನೇರವಾಗಿ ವಿಕೆಟ್ ಗೆ ಬಡಿಯಿತು. ಈ ವೇಳೆ ಕ್ರಿಸ್ ಬಿಟ್ಟು ಮುಂದೆ ಹೋಗಿದ್ದ ಕೇನ್ ವಿಲಿಯಮ್ಸನ್ ರನೌಟ್ ಆದರು.
ಖುಷಿಯ ಸಂಭ್ರಮದಲ್ಲಿದ್ದ ಮಾರ್ಕ್ ವುಡ್ ನೋವಿನಿಂದ ಬೆರಳನ್ನು ಬಾಯಲ್ಲಿಟ್ಟು ಚೀಪಿದರೋ ಅಥವಾ ಎದುರಾಳಿ ಆಟಗಾರನನ್ನು ಹೀಯಾಳಿಸಲು ಮಾಡಿದರೋ ತಿಳಿಯದು. ಒಟ್ಟಿನಲ್ಲಿ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics