ಕ್ರಿಕೆಟ್

ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಔಟ್, ಭಾರತ, ಆಸಿಸ್, ಇಂಗ್ಲೆಂಡ್, ಕಿವೀಸ್ ಸೆಮೀಸ್ ನಲ್ಲಿ ಹಣಾಹಣಿ!

Srinivasamurthy VN
ಲಂಡನ್: ಬಾಂಗ್ಲಾದೇಶದ ವಿರುದ್ಧ 500 ರನ್ ಹೊಡೆಯುತ್ತೇವೆ ಎಂದು ಹೇಳಿದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಯೋಜನೆ ವಿಫಲವಾಗಿದ್ದು, ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಿಂದ ಹೊರದಬ್ಬಲ್ಪಟ್ಟಿದೆ.
ಹೀಗಾಗಿ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿ ಫೈನಲ್ ಹಂತಕ್ಕೆ ತಲುಪಿವೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ದೊಡ್ಡ ಮೊತ್ತ ಕಲೆಹಾಕಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಬಾಂಗ್ಲಾದೇಶವನ್ನು ಕಟ್ಟಿಹಾಕಬೇಕಿತ್ತು. 
ಆದರೆ 314 ರನ್ ಗಳಿಸಿದ್ದ ಪಾಕಿಸ್ತಾನ ಬಾಂಗ್ಲಾದೇಶವನ್ನು ಕೇವಲ 7 ರನ್ ಗಳಿಗೆ ಕಟ್ಟಿ ಹಾಕಬೇಕಿತ್ತು. ಆಗ ಮಾತ್ರ ಸೆಮಿಫೈನಲ್ ಗೆ ಅರ್ಹತೆ ಗಿಟ್ಟಿಸುತ್ತಿತ್ತು. ಆದರೆ ಈ ಕಾರ್ಯದಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಸೆಮೀಸ್ ಹಾದಿಯಿಂದ ಹೊರಬಿದ್ದಿದ್ದೆ.
ಅದರಂತೆ ರನ್ ರೇಟ್ ಆಧಾರದಲ್ಲಿ ನ್ಯೂಜಿಲೆಂಡ್ ತಂಡ ಸೆಮೀಸ್ ಗೆ ಅರ್ಹತೆ ಪಡೆದಿದ್ದು, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ಪೈಕಿ ಒಂದು ತಂಡದೊಂದಿಗೆ ಫೈನಲ್ ಗಾಗಿ ಸ್ಪರ್ಧಿಸಲಿದೆ.
SCROLL FOR NEXT