ಕ್ರಿಕೆಟ್

ಬಾಂಗ್ಲಾದೇಶಕ್ಕೆ 315 ರನ್ ಗಳ ಗುರಿ ನೀಡಿದ ಪಾಕಿಸ್ತಾನ, ಸೆಮೀಸ್ ರೇಸ್ ನಿಂದ ಹೊರಕ್ಕೆ!

Srinivasamurthy VN
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದ್ದು, ಇಂದು ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ 315 ರನ್ ಗಳ ಟಾರ್ಗೆಟ್ ನೀಡಿದೆ..
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ, 314 ರನ್ ಪೇರಿಸಿತು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ (100 ರನ್) ಶತಕ ಸಿಡಿಸಿದರೆ, ಬಾಬರ್ ಅಜಂ 96 ರನ್ ಸಿಡಿಸಿ ಶತಕ ವಂಚಿತರಾದರು. ಮಧ್ಯಮ ಕ್ರಮಾಂಕದಲ್ಲಿ ಇಮಾದ್ ವಸೀಂ 43 ರನ್ ಸಿಡಿಸಿ ಪಾಕಿಸ್ತಾನ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಆದರೆ ಕೆಳ ಕ್ರಮಾಂಕದ ಆಟಗಾರರ ಎರಡಂಕಿ ಮೊತ್ತ ದಾಟಲು ವಿಫಲವಾದ್ದರಿಂದ ಪಾಕಿಸ್ತಾನ ದೊಡ್ಡ ಮೊತ್ತ ಕಲೆ ಹಾಕವು ವಿಫಲವಾಯಿತು.
ಹೀಗಾಗಿ ನಾಯಕ ಸರ್ಫರಾಜ್ ಅಹ್ಮದ್ ಅವರ 500 ರನ್ ಗಳ ಟಾರ್ಗೆಟ್ ಮಿಸ್ ಆಗಿದ್ದು, ಪಾಕಿಸ್ತಾನ 314 ರನ್ ಗಳಿಸಿದ್ದರಿಂದ ಬಾಂಗ್ಲಾದೇಶವನ್ನು 7 ರನ್ ಗಳಿಗೆ ಆಲೌಟ್ ಮಾಡಬೇಕಿತ್ತು. ಆಗ ಮಾತ್ರ ಸೆಮಿ ಫೈನಲ್ ಗೆ ಅರ್ಹತೆ ಗಿಟ್ಟಿಸಲಿತ್ತು. ಆದರೆ ಬಾಂಗ್ಲಾದೇಶ ಈಗಾಗಲೇ 39 ರನ್ ಪೇರಿಸಿದ್ದು, ಆ ಮೂಲಕ ರನ್ ರೇಟ್ ಲೆಕ್ಕಾಚಾರದಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಇನ್ನು ಬಾಂಗ್ಲಾದೇಶದ ಪರ ಮುಸ್ತಫಿಜುರ್ 5 ವಿಕೆಟ್ ಕಬಳಿಸಿದರೆ, ಮೊಹಮದ್ ಸೈಫುದ್ದೀನ್ 3 ಮತ್ತು ಮೆಹ್ದಿ ಹಸನ್ 1 ವಿಕೆಟ್ ಪಡೆದರು. ಇನ್ನು ಇದೀಗ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ 8 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ.
SCROLL FOR NEXT