ಕ್ರಿಕೆಟ್

ಪಾಕ್ ವಿರುದ್ಧವೂ ಅರ್ಧ ಶತಕ, ವಿಶ್ವದಾಖಲೆ ಬರೆದ 'ಸವ್ಯಸಾಚಿ', ಸಚಿನ್ ದಾಖಲೆಯೂ ಛಿದ್ರ!

Srinivasamurthy VN
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಲೀಗ್ ಹಂತದಲ್ಲೇ ಹೊರಗೆ ಹೋಗಿರಬಹುದು, ಆದರೆ ಆ ತಂಡದ ಈ ಓರ್ವ ಆಟಗಾರ ಮಾತ್ರ ಚಾಂಪಿಯನ್ ತಂಡಗಳಿಗೂ ಸೆಡ್ಡು ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಹೌದು.. ಇಂದು ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲೂ ಬಾಂಗ್ಲಾದೇಶದ ಸವ್ಯಸಾಚಿ ಬ್ಯಾಟ್ಸ್ ಮನ್ ಶಕೀಬ್ ಅಲ್ ಹಸನ್ ಅಬ್ಬರಿಸಿದ್ದು, ಅರ್ಧ ಶತಕ ಸಿಡಿಸಿದ್ದಾರೆ. ಒಟ್ಟು 77 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ ಶಕೀಬ್ 64 ರನ್ ಸಿಡಿಸಿದ್ದಾರೆ. ಇದು ಹಾಲಿ ಟೂರ್ನಿಯಲ್ಲಿ ಅವರ 7ನೇ ಅರ್ಧಶತಕವಾಗಿದ್ದು, ಇದು ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. 
ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್ ಮನ್ ಓರ್ವ ಇಷ್ಟು ಅರ್ಧಶತಕ ಸಿಡಿಸಿದ ಇತಿಹಾಸವೇ ಇಲ್ಲ.. ಈ ಹಿಂದೆ ಈ ದಾಖಲೆ ಭಾರತದ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 2003ರ ವಿಶ್ವಕಪ್ ಟೂರ್ನಿಯಲ್ಲಿ 6 ಅರ್ಧಶತಕ ಸಿಡಿಸಿದ್ದರು. ಆದರೆ ಇದೀಗ ಈ ದಾಖಲೆಯನ್ನು ಶಕೀಬ್ ತಮ್ಮ ಏಳು ಅರ್ಧಶತಕಗಳ ಮೂಲಕ ಧೂಳಿಪಟ ಮಾಡಿದ್ದಾರೆ. ಅಂತೆಯೇ ತಮ್ಮ ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ ಶಕೀಬ್ ಒಟ್ಟು 11 ಅರ್ಧಶತಕ ಸಿಡಿಸಿದ್ದಾರೆ. 
ರನ್ ಗಳಿಕೆಯಲ್ಲೂ ದಾಖಲೆ
ಇನ್ನು ವೈಯುಕ್ತಿಕ ರನ್ ಗಳಿಕೆಯಲ್ಲೂ ಶಕೀಬ್ ದಾಖಲೆ ನಿರ್ಮಿಸಿದ್ದು, ಪಾಕಿಸ್ತಾನದ ವಿರುದ್ಧದ 64ರನ್ ಗಳೂ ಸೇರಿದಂತೆ ಟೂರ್ನಿಯಲ್ಲಿ ಶಕೀಬ್ ಒಟ್ಟು 606 ರನ್ ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್ ನಲ್ಲಿ ಒಟ್ಟು 11 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿ, 10ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಏಕೈಕ ಆಲ್ರೌಂಡರ್ ಎಂಬ ಕೀರ್ತಿಗೂ ಶಕೀಬ್ ಪಾತ್ರರಾಗಿದ್ದಾರೆ. ಶಕೀಬ್ ಅವರ ಈ ಆಟಕ್ಕೆ ಐಸಿಸಿ ಕೂಡ ಮಾರು ಹೋಗಿದ್ದು, ಟ್ವಿಟರ್ ನಲ್ಲಿ ಕುರಿತಂತೆ ಸರಣಿ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದೆ.
SCROLL FOR NEXT