ಶೋಯೆಬ್ ಮಲಿಕ್ ಸಾನಿಯಾ 
ಕ್ರಿಕೆಟ್

ನಿಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ: ನಿವೃತ್ತಿ ಘೋಷಿಸಿದ ಶೋಯೆಬ್ ಮಲಿಕ್ ಗೆ ಪತ್ನಿ ಸಾನಿಯಾ ಭಾವಪೂರ್ಣ ಸಂದೇಶ

ಶುಕ್ರವಾರ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಗೆ ಪತ್ನಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾವನಾತ್ಮಕ ಸಂದೇಶದವನ್ನು ತಿಳಿಸಿದ್ದಾರೆ.

ಶುಕ್ರವಾರ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಗೆ ಪತ್ನಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾವನಾತ್ಮಕ ಸಂದೇಶದವನ್ನು ತಿಳಿಸಿದ್ದಾರೆ.
ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಸಾನಿಯಾ ತನ್ನ ಪತಿಗೆ ಸಂದೇಶ ಹೇಳಿದ್ದಾರೆ.
ಶುಕ್ರವಾರ ಲಾರ್ಡ್ಸ್‌ನಲ್ಲಿ  ಐಸಿಸಿ ಕ್ರಿಕೆಟ್ ವಿಶ್ವಕಪ್ 2019ನಲ್ಲಿ ಪಾಕಿಸ್ತಾನ ಬಾಂಗ್ಲಾ ವಿರುದ್ಧ ಜಯ ಗಳಿಸಿದರೂ ಟೂರ್ನಿಯಿಂದ ಹೊರಬಿದ್ದಿದೆ.ಈ ವೇಳೆ ಪಾಕಿಸ್ತಾನ ಆಟಗಾರ ಶೋಯಬ್ ಮಲಿಕ್ ತಾವು ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
ಈ ಕುರಿತಂತೆ ಟ್ವಿಟ್ ಮಾಡಿರುವ ಸಾನಿಯಾ ಮಿರ್ಜಾ "ಎಲ್ಲಾ ಕಥೆಗೆ ಅಂತ್ಯವಿದೆ, ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವೂ ಹೊಸದೊಂದು ಆರಂಭಕ್ಕೆ ನಾಂದಿಯಾಗಲಿದೆ" ಎಂದಿದ್ದಾರೆ.
"ಎಲ್ಲಾ ಕಥೆಗೆ ಅಂತ್ಯವಿದೆ, ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವೂ ಹೊಸದೊಂದು ಆರಂಭಕ್ಕೆ ನಾಂದಿಯಾಗಲಿದೆ 20  ವರ್ಷಗಳಿಂಡ ನೀವು ನಿಮ್ಮ ದೇಶಕ್ಕಾಗಿ ಆಡಿದ್ದೀರಿ ನೀವು ಹೆಮ್ಮೆ, ನಮ್ರತೆ, ಗೌರವದಿಂದ ಇದನ್ನು ಮಾಡಿದ್ದೀರಿ. ಇಜಾನ್ (ಮಗ) ಮತ್ತು ನಾನು ನಿಮ್ಮೆಲ್ಲಾ ಸಾಧನೆಗಳ ಬಗೆಗೆ ಹೆಮ್ಮೆ ಪಡುತ್ತೇವೆ"  ಸಾನಿಯಾ ಮಿರ್ಜಾ ಬರೆದಿದ್ದಾರೆ.
ಪ್ರಸಕ್ತ ವಿಶ್ವಕಪ್ ನಲ್ಲಿ ಮಲಿಕ್  ಅಡಿದ 3 ಪಂದ್ಯದಲ್ಲಿ 2 ಬಾರಿ ಶೂನ್ಯಕ್ಕೆ ಔಟ್  ಆಗಿದ್ದರೆ ಮೂರು ಪಂದ್ಯಗಳಿಂದ ಕೇವಲ 8 ರನ್ ಕಲೆ ಹಾಕಿದ್ದರು. ಭಾರತ ವಿರುದ್ಧದ ಪಂದ್ಯದ ನಂತರ ಮಲಿಕ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಇದುವರೆವಿಗೆ 287 ಏಕದಿನ ಪಂದ್ಯಗಳನ್ನು ಆಡಿರುವ ಮಲಿಕ್ , 7,534 ರನ್ ಗಳಿಸಿದ್ದರೆ  35 ಟೆಸ್ಟ್ ಪಂದ್ಯಗಳಿಂದ  1898 ರನ್ ಹಾಗೂ 111 ಟಿ20 ಪಂದ್ಯಗಳಿಂದ 2,263 ರನ್ ಗಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ