ಕ್ರಿಕೆಟ್

ವಿಶ್ವಕಪ್ 2019: ಅನಿರೀಕ್ಷಿತವಾಗಿ ಅಗ್ರಸ್ಥಾನಕ್ಕೇರಿದ ಭಾರತ, ಸೆಮೀಸ್ ಲೆಕ್ಕಾಚಾರವೇ ಉಲ್ಟಾ, ಟೀ ಇಂಡಿಯಾಗೇನು ಲಾಭ?

Vishwanath S
ಲಂಡನ್: ವಿಶ್ವಕಪ್ ನಲ್ಲಿ ಮತ್ತೆ ಚೋಕರ್ಸ್ ಹಣೆಪಟ್ಟಿಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದಿದ್ದು ಪರಿಣಾಮ ಈ ಹಿಂದೆ ಊಹಿಸಿದಂತಾ ಸೆಮಿಫೈನಲ್ ಲೆಕ್ಕಾಚಾರಗಳು ಬದಲಾಗಿದ್ದು ಇದರಿಂದ ಭಾರತಕ್ಕೆ ಲಾಭವೇ ಜಾಸ್ತಿಯಾಗಿದೆ. 
ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿತ್ತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತ 15 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತ್ತು. ಇನ್ನು ಸೋಲಿನ ಆಘಾತವನ್ನೇ ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಭಾರತಕ್ಕೆ ಹೆಚ್ಚು ಲಾಭವಾಗಿದೆ. 
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಕದನ ನಡೆಯಲಿದೆ. ಇನ್ನು ಸೆಮಿಫೈನಲ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಸೆಣೆಸಲಿದ್ದು ಸದ್ಯ ಟೂರ್ನಿಯಲ್ಲಿ ಆರಂಭದಲ್ಲಿ ಬಲಿಷ್ಠವಾಗಿ ಕಾಣಿಸಿಕೊಂಡಿದ್ದ ನ್ಯೂಜಿಲ್ಯಾಂಡ್ ಕೊನೆಯ ಕೆಲ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇನ್ನು ಕೆಲ ಆಟಗಾರರು ಫಾರ್ಮ್ ನಲ್ಲಿಲ್ಲ. ಇದು ಭಾರತಕ್ಕೆ ಕೊಂಚ ವರದಾನವಾಗಲಿದೆ.
ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೆಮಿಫೈನಲ್ ನಲ್ಲಿ ಸೆಣೆಸಲಿದೆ. ಇನ್ನು ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದ್ದು ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಾಗಿತ್ತು. ಸೆಮಿಸ್ ನಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ ಭಾರತ ಸೆಣೆಸಿದ್ದರೆ ಅಲ್ಲಿ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆನೂ ಇತ್ತು. ಆದರೆ ನಿನ್ನೆ ನಡೆದ ಅನಿರೀಕ್ಷಿತ ಆಫ್ರಿಕಾ ಗೆಲುವಿನಿಂದಾಗಿ ಭಾರತಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ವಿರ್ಮಶಿಸಿದ್ದಾರೆ.
SCROLL FOR NEXT