ಕ್ರಿಕೆಟ್

ಐಸಿಸಿ ರ‍್ಯಾಂಕಿಂಗ್: ವಿರಾಟ್ ಅಗ್ರಸ್ಥಾನದಲ್ಲಿ ಮುಂದುವರಿಕೆ, ಅಂತರ ಕಡಿಮೆಯಾಗಿಸಿದ ರೋಹಿತ್

Lingaraj Badiger
ದುಬೈ: ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ ಚೇತೋಹಾರಿ ಪ್ರದರ್ಶನ ನೀಡುತ್ತಿದ್ದು, ಐದು ಅರ್ಧಶತಕ ದಾಖಲಿಸಿದ್ದಾರೆ. ಈ ಮೂಲಕ ನೂತನವಾಗಿ ಐಸಿಸಿ ಹೊರಡಿಸಿರುವ ಶ್ರೇಯಾಂಕಿತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ರೋಹಿತ್ ಶರ್ಮಾ ಮೊದಲ ಹಾಗೂ ಎರಡನೇ ಶ್ರೇಯಾಂಕದ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ.
ಕೊಹ್ಲಿ 442 ರನ್ ಗಳನ್ನು ಕಲೆ ಹಾಕಿದ್ದು 63.14ರ ಸರಾಸರಿ ಹೊಂದಿದ್ದಾರೆ. ಅಲ್ಲದೆ 891 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. 
ವಿಶ್ವಕಪ್ ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಮುಂಬೈಕರ್ ರೋಹಿತ್ ಶರ್ಮಾ ಐದು ಶತಕ ಬಾರಿಸಿ ಆರ್ಭಟಿಸಿದ್ದು, 885 ಅಂಕ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಹಾಗೂ ರೋಹಿತ್ ಮಧ್ಯ 6 ಅಂಕಗಳ ವ್ಯತ್ಯಾಸ ಇದೆ.
ರೋಹಿತ್ ಶರ್ಮಾ ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಇದೇ ಫಾರ್ಮ್ ಮುಂದುವರಿಸಿದರೆ ವಿರಾಟ್ ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
SCROLL FOR NEXT