ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಭಾರತಕ್ಕೆ ತಲೆನೋವಾಗಿದ್ದ ಕೇನ್ ವಿಲಿಯಮ್ಸನ್ ಔಟ್, ಮತ್ತೆ ಸಂಕಷ್ಟದಲ್ಲಿ ಕಿವೀಸ್

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದು, ಆರ್ಧಶತಕ ಗಳಿಸಿ ನ್ಯೂಜಿಲೆಂಡ್ ಪಾಲಿಗೆ ಆಪದ್ಭಾಂಧವರಾಗಿದ್ದ ಕೇನ್ ವಿಲಿಯಮ್ಸನ್ ಔಟ್ ಆಗಿದ್ದಾರೆ.
ಇಂದು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿ, ಕಿವೀಲ್ ಬ್ಯಾಟಿಂಗ್ ಗೆ ಜೀವ ತುಂಬಿದ ನಾಯಕ ಕೇನ್ ವಿಲಿಯಮ್ಸನ್ ಕೊನೆಗೂ ಔಟ್ ಆಗಿದ್ದಾರೆ. 95 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 67 ರನ್ ಸಿಡಿಸಿ ಶತಕದತ್ತ ದಾಪುಗಾಲಿರಿಸಿದ್ದ ವಿಲಿಯಮ್ಸನ್, ಚಹಲ್ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ.
ಭಾರತದ ಯಜುವೇಂದ್ರ ಚಾಹಲ್ ಎಸೆದ 36ನೇ ಓವರ್ ನ 2ನೇ ಎಸೆತದಲ್ಲಿ ವಿಲಿಯಮ್ಸನ್ ಕವರ್ ನತ್ತ ಚೆಂಡು ಬಾರಿಸಿದರು. ಆದರೆ ಅಲ್ಲಿಯೇ ನಿಂತಿದ್ದ ರವೀಂದ್ರ ಜಡೇಜಾ ಅತ್ಯಂತ ಚಾಕಚಕ್ಯತೆಯಿಂದ ಚೆಂಡನ್ನು ಹಿಡಿತಕ್ಕೆ ಪಡೆದು ಕಿವೀಸ್ ನಾಯಕನನ್ನು ಪೆವಿಲಿಯನ್ ಗೆ ಅಟ್ಟಿದರು. ಆ ಮೂಲಕ ಭಾರತಕ್ಕೆ ಮೇಲುಗೈ ತಂದಿತ್ತರು.
ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 39 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ಭಾರತದ ಪರ ಜಸ್ ಪ್ರೀತ್ ಬುಮ್ರಾ. ಯಜುವೇಂದ್ರ ಚಹಲ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.
SCROLL FOR NEXT