ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಸೋತರೂ, ಮೆಗ್ರಾತ್ ದಾಖಲೆ ಧೂಳಿಪಟ ಮಾಡಿದ ಮಿಚೆಲ್ ಸ್ಟಾರ್ಕ್!

Srinivasamurthy VN
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾದ ಫೈನಲ್ ಪ್ರವೇಶಿಸುನ ಕನಸು ಭಗ್ನಗೊಂಡಿದ್ದರೂ, ಆ ತಂಡದ ಪ್ರಮುಖವೇಗಿ ಮಿಚೆಲ್ ಸ್ಟಾರ್ಕ್ ಮಹತ್ವದ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್, ತಮ್ಮದ ತಂಡದ ಮಾಜಿ ಆಟಗಾರ ಗ್ಲೇನ್ ಮೆಗ್ರಾತ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಧಿಕ ವಿಕೆಟ್ ಪಡೆದು ಬೀಗಿದ ಕೀರ್ತಿಯನ್ನು ಹೊಂದಿರುವ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಗ್ಲೇನ್ ಮೆಗ್ರಾತ್ ಅವರ ದಾಖಲೆಯನ್ನು ಸ್ಚಾರ್ಕ್ ಹಿಂದಿಕ್ಕಿದ್ದಾರೆ.
ಮೆಗ್ರಾತ್ ಅವರು 2007ರ ವಿಶ್ವಕಪ್ ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ 26 ವಿಕೆಟ್ ಕಬಳಿಸಿದ್ದರು. ಅಲ್ಲದೆ ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ್ದರು. ಇದೀಗ ಮೆಗ್ರಾತ್ ಅವರ ಈ ದಾಖಲೆಯನ್ನು ಸಾರ್ಕ್ 27 ವಿಕೆಟ್ ಕಬಳಿಸುವ ಮೂಲಕ ಅಳಿಸಿ ಹಾಕಿದ್ದಾರೆ.  ಇಂಗ್ಲೆಂಡ್ ವಿರುದ್ಧದ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಸ್ಟಾರ್ಕ್, ಪಂದ್ಯದ 18ನೇ ಓವರ್ ನಲ್ಲಿ, ಆತಿಥೇಯ ತಂಡದ ಆರಂಭಿಕ ಆಟಗಾರ ಜಾನಿ ಬೇರ್ ಸ್ಟೋ ಅವರಿನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದರು. ಈ ಮೂಲಕ ವಿಶ್ವಕಪ್ ನಲ್ಲಿ 27 ವಿಕೆಟ್ ಪಡೆದು ಸಾಧನೆ ಮಾಡಿದರು.
SCROLL FOR NEXT