ಕ್ರಿಕೆಟ್

ಕಾಶ್ಮೀರದಲ್ಲಿ 15 ದಿನಗಳ ಕಾಲ ಲೆಪ್ಟಿನೆಂಟ್ ಕರ್ನಲ್ ಧೋನಿ ಕರ್ತವ್ಯ ನಿರ್ವಹಣೆ

Nagaraja AB
ಜಮ್ಮು-ಕಾಶ್ಮೀರ:ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರನ್ನು 15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.  ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
ಲೆಪ್ಟಿನೆಂಟ್ ಕರ್ನಲ್ ಗೌರವ ಹೊಂದಿರುವ ಎಂಎಸ್ ಧೋನಿ ಕ್ರಿಕೆಟ್ ನಿಂದ ಎರಡು ತಿಂಗಳ ಕಾಲ ವಿರಾಮ  ಪಡೆದುಕೊಂಡಿದ್ದು, ಜುಲೈ 31ರಿಂದ ಆಗಸ್ಟ್ 15ರವರೆಗೂ 106 ಕಾಲಾಳುಪಡೆ ಬೆಟಾಲಿಯನ್ ನಲ್ಲಿ  ಸೇವೆ ಸಲ್ಲಿಸಲಿದ್ದಾರೆ. 
ಒಂದು ಕಾಲದಲ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ , ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಾವೇ ಸ್ವತ: ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು. 
2011 ರಲ್ಲಿ ಭಾರತೀಯ ಸೇನೆಯಿಂದ  ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿದ್ದ ಧೋನಿ  ಪ್ರಾದೇಶಿಕ ಸೈನ್ಯದ 106 ಕಾಲಾಳುಪಡೆ ಬೆಟಾಲಿಯನ್‌ಗೆ ಸೇರಿದ್ದಾರೆ.ನಾಲ್ಕು ವರ್ಷಗಳ ಹಿಂದೆ ಆಗ್ರಾ ತರಬೇತಿ ಶಿಬಿರದಲ್ಲಿ ಭಾರತೀಯ ವಾಯುಪಡೆ ವಿಮಾನಗಳಿಂದ 5  ಧುಮುಕುಕೊಡೆ ಜಿಗಿತ ತರಬೇತಿ  ( ಪ್ಯಾರಾಚೂಟ್ ಟ್ರೇನಿಂಗ್ ಜಂಪ್ಸ್ )  ಪೂರ್ಣಗೊಳಿಸಿ ಪ್ಯಾರಾಟ್ರೂಪರ್ ಆಗಿ ಹೊರಹೊಮ್ಮಿದ್ದರು.
SCROLL FOR NEXT