ಇಮಾಮ್ ಉಲ್ ಹಕ್ 
ಕ್ರಿಕೆಟ್

ಹಲವು ಯುವತಿಯರೊಂದಿಗೆ ಸಂಬಂಧ: ಕ್ಷಮೆಯಾಚಿಸಿದ ಪಾಕ್ ಆಟಗಾರ

ಹಲವು ಯುವತಿಯೊಂದಿಗೆ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲೆಜೆಂಡ್ ಇಂಜಾಮಾಮ್ ಉಲ್ ಹಕ್ ಸಂಬಂಧಿ, ವಿವಾದಾತ್ಮಕ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಕ್ಷಮೆಯಾಚಿಸಿದ್ದಾರೆ

ಇಸ್ಲಾಮಾಬಾದ್:  ಹಲವು ಯುವತಿಯೊಂದಿಗೆ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲೆಜೆಂಡ್ ಇಂಜಾಮಾಮ್ ಉಲ್ ಹಕ್ ಸಂಬಂಧಿ, ವಿವಾದಾತ್ಮಕ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್  ಕ್ಷಮೆಯಾಚಿಸಿದ್ದಾರೆ.  ಪಾಕಸ್ತಾನ ಕ್ರಿಕೆಟ್ ಮಂಡಳಿ ಈ ಪ್ರಕರಣವನ್ನು ಖಂಡಿಸಿದ್ದರೂ ಆತನಿಗೆ ಯಾವುದೇ ಶಿಕ್ಷೆಗೆ ಮುಂದಾಗಿಲ್ಲ. 
ವಾಟ್ಸಾಪ್ ನಲ್ಲಿ  ಪಾಕ್ ಆರಂಭಿಕ ಆಟಗಾರ  ಇಮಾಮ್ ಉಲ್ ಹಕ್ ಕಳುಹಿಸಿರುವ ಆಕ್ಷೇಪಾರ್ಹ ಸಂದೇಶವುಳ್ಳ ಸ್ಕ್ರೀನ್ ಶಾಟ್ ನ್ನು ಕೆಲ ಯುವತಿಯರು ಪೋಸ್ಟ್ ಮಾಡುವ ಮೂಲಕ ಆತ ತಮ್ಮನ್ನು ದಾರಿ ತಪ್ಪಿಸುತ್ತಿದ್ದಾನೆ ಎಂದು ಆರೋಪಿಸಿದ್ದರು. 
ಯಾವುದೇ ಹೊಸ ಹುಡುಗಿಯ ಪರಿಚಯ ಮಾಡಿಕೊಳ್ಳುವಾಗ ಆತ ತಾನಿನ್ನೂ ಸಿಂಗಲ್ ಎಂದು ಹೇಳಿಕೊಳ್ಳುತ್ತಾನೆ. ಅಲ್ಲದೆ ತನ್ನ ಮೊಬೈಲ್ ನಲ್ಲಿರುವ ಚಾಟಿಂಗ್ ಮಾಹಿತಿಯನ್ನು ಆತ ಮುಂಜಾಗ್ರತಾ ಕ್ರಮವಾಗಿ ಡಿಲೀಟ್ ಮಾಡುತ್ತಿರುತ್ತಾನೆ. ಎಂದು ಆರೋಪಿಸಿದ ಕೆಲ ಯುವತಿಯರು ಅದರ ಸ್ಕ್ರೀನ್ ಶಾಟ್ ಸಂಗ್ರಹಿಸಿ ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. 
ಈ ಬಗ್ಗೆ ಇಮಾಮ್ ಉಲ್ ಹಕ್ ಕ್ಷಮೆಯಾಚಿಸಿದ್ದಾರೆ. ಆದರೆ, ಇದು  ಆತನ ವೈಯಕ್ತಿಕ ವಿಚಾರವಾಗಿದೆ. ಆದಾಗ್ಯೂ, ನಮ್ಮ ಆಟಗಾರರು ಉತ್ತಮ ಶಿಸ್ತು ಹಾಗೂ ನಿಯಮಗಳನ್ನು ರೂಡಿಸಿಕೊಳ್ಳುವಂತೆ ಸೂಚಿಸಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಂಡಿ ವಾಸೀಂ ಖಾನ್ ಹೇಳಿದ್ದಾರೆ. 
ಆಟಗಾರರ ವೈಕಕ್ತಿಕ ಸಂಬಂಧಗಳ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಆದರೆ, ನಮ್ಮ ಆಟಗಾರರು ಪಾಕಿಸ್ತಾನ ಕ್ರಿಕೆಟ್ ಹಾಗೂ ಪಾಕಿಸ್ತಾನದ ರಾಯಬಾರಿಗಳಾಗಿ ಹೆಚ್ಚಿನ ಹೊಣೆ ಕಾಪಾಡಬೇಕಾಗಿದೆ.  ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

SCROLL FOR NEXT