ತವರಿನಲ್ಲಿ ಬಾಂಗ್ಲಾ ತಂಡವನ್ನು ಬಗ್ಗುಬಡಿದ ಇಂಗ್ಲೆಂಡ್!
ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಇಂಗ್ಲೆಂಡ್ ಬಾಂಗ್ಲಾ ತಂಡದ ವಿರುದ್ಧ106 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಜೂ.08 ರಂದು ಶೋಫಿಯಾ ಗಾರ್ಡನ್ಸ್ ಕಾರ್ಡಿಫ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಬ್ಯಾಟ್ಸ್ ಮನ್ ಜಾಸನ್ ರಾಯ್ ದಾಖಲಿಸಿದ 153 ರನ್ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 386 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ದೇಶ 48.05 ಓವರ್ ಗಳಿಗೇ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲೊಪ್ಪಿಕ್ಕೊಳ್ಳುವ ಮೂಲಕ ಇಂಗ್ಲೆಂಡ್ ಗೆ ಬರೊಬ್ಬರಿ 106 ರನ್ ಗಳ ಜಯ ದೊರೆತಿದೆ.
ಸ್ಕೋರ್ ಕಾರ್ಡ್ / ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಇಂಗ್ಲೆಂಡ್ ತಂಡ, ಬಾಂಗ್ಲಾವನ್ನು ಮಣಿಸುವ ಮೂಲಕ 2 ನೇ ಗೆಲುವನ್ನು ದಾಖಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics