ಕ್ರಿಕೆಟ್

3 ದಶಲಕ್ಷ ಡಾಲರ್ ಪಾವತಿಗೆ ವಿಫಲ: ಆಸ್ಟ್ರೇಲಿಯಾ ಬ್ಯಾಟ್ ತಯಾರಕ ಸಂಸ್ಥೆ ವಿರುದ್ಧ ಸಚಿನ್ ಮೊಕದ್ದಮೆ!

Raghavendra Adiga
ತಮ್ಮ ಜತೆ ವಿಶೇಷ ಪರವಾನಗಿ ಒಪ್ಪಂದ ಮಾಡಿಕೊಂಡು ಸುಮಾರು 3 ದಶಲಕ್ಷ ಯುಎಸ್ ಡಾಲರ್ ಪಾವತಿಸಲು ವಿಫಲವಾಗಿರುವ ಆಸ್ಟ್ರೇಲಿಯ ಮೂಲದ ಬ್ಯಾಟ್ ತಯಾರಿಕಾ ಸಂಸ್ಥೆ ವಿರುದ್ಧ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮೊಕದ್ದಮೆ ದಾಖಲಿಸಿದ್ದಾರೆ.
ಆಸ್ಟ್ರೇಲಿಯಾ ಬ್ಯಾಟ್ ತಯಾರಿಕಾ ಸಂಸ್ಥೆಯಾಗಿರುವ ಸ್ಪಾರ್ಟಾನ್ ಸ್ಪೋರ್ಟ್ಸ್ ವಿರುದ್ಧ ಸಚಿನ್ ತೆಂಡೂಲ್ಕರ್ ಮೊಕದ್ದಮೆ ದಾಖಲಿಸಿದ್ದಾರೆ.
"ಸಿಡ್ನಿ ಮಾರ್ನಿಂಗ್ ಹೆರಾಲ್ಡ್" ವರದಿಯಂತೆ ಸ್ಪಾರ್ಟಾನ್ ಸ್ಪೋರ್ಟ್ಸ್ ಸಂಸ್ಥೆ ಹಾಗೂ ಸಚಿನ್ ನಡುವೆ ಒಪ್ಪಂದವೇರ್ಪಟ್ಟಿದ್ದು, ಆ ಒಪ್ಪಂದದ ಅನುಸಾರ ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡಲು ತನ್ನ ಹೆಸರು, ಭಾವಚಿತ್ರ,ಗಳನ್ನು ಬಳಸಿಕೊಳ್ಳಲು ಸಚಿನ್ ಅನುಮತಿ ನೀಡಿದ್ದರು. 
ಈ ಒಪ್ಪಂದದಂತೆ ಸಂಸ್ಥೆಯ ಉತ್ಪನ್ನಗಳಾದ ಬಟ್ಟೆಗಳು, ಬ್ಯಾಟ್ ನ ಮೇಲೆ ವಿಶಿಷ್ಟವಾದ ಸಿಲೂಯೆಟ್ ಲೋಗೊಗಳನ್ನು ಮುದ್ರಿಸಿದೆ.
ಫೆಡರಲ್ ಸರ್ಕ್ಯೂಟ್ ಕೋರ್ಟ್ ನಲ್ಲಿ ದಾಖಲಾದ ಮೊಕದ್ದಮೆಯಂತೆ ಸ್ಪಾರ್ಟಾನ್ ಸ್ಪೋರ್ಟ್ಸ್ ಇಂಟರ್ನ್ಯಾಷನಲ್ ಜುಲೈ 2016 ರಲ್ಲಿ ಈ ಒಪ್ಪಂದ ಮಾಡಿಕೊಂಡಿತ್ತು. ಪ್ರತಿ ವರ್ಷ ಸಚಿನ್ ಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸುತ್ತೇನೆ ಎಂದು ಒಪ್ಪಂದವಾಗಿತ್ತು. 
ಆದರೆ ಸಚಿನ್ ಪರ ವಕೀಲರು ಆರೋಪಿಸಿದಂತೆ ಇದುವರೆಗೆ ತೆಂಡೂಲ್ಕರ್ ಅವರಿಗೆ ಸಂಸ್ಥೆ ಯಾವ ಹಣವನ್ನೂ ಪಾವತಿಸಿಲ್ಲ. ಒಪ್ಪಂದದ ತರುವಾಯ ಸುಮಾರು 2 ಮಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚು ಹಣ ಸಂದಾಯವಾಗಬೇಕಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
SCROLL FOR NEXT