ಕ್ರಿಕೆಟ್

ಪಿಚ್, ತರಬೇತಿ ಸೌಲಭ್ಯಗಳ ಬಗ್ಗೆ ಐಸಿಸಿಗೆ ದೂರು ನೀಡಿದ ಶ್ರೀಲಂಕಾ

Lingaraj Badiger
ಲಂಡನ್: ಶ್ರೀಲಂಕಾ ತಂಡ ತನಗೆ ನೀಡುತ್ತಿರುವ ಪಿಚ್ ಹಾಗೂ ತರಬೇತಿ ಸೌಲಭ್ಯಗಳ ಬಗ್ಗೆ ಬೇಸರಗೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ದೂರು ನೀಡಿದೆ. 
ಶ್ರೀಲಂಕಾ ತಂಡದ ಮ್ಯಾನೇಜರ್ ಅಸಾಂತ್ ಡಿ ಮೇಲ್ ಅವರು ಐಸಿಸಿಗೆ ಪತ್ರ ಬರೆದಿದ್ದು, ತಂಡ ಪಂದ್ಯವಾಡುವಾಗ ಪಿಚ್ ಗಳು ಸರಿಯಾಗಿಲ್ಲ ಹಾಗೂ ತರಬೇತಿ ಸೌಲಭ್ಯಗಳು ಸರಿಯಾಗಿ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. 
ಶ್ರೀಲಂಕಾ ತಂಡ ಆಡಬೇಕಿದ್ದ ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದ್ದು, ಅಭ್ಯಾಸ ಪಂದ್ಯದ ವೇಳೆಯೂ ಪಿಚ್ ಸರಿಯಾಗಿರಲಿಲ್ಲ. ಅಭ್ಯಾಸ ಪಂದ್ಯದಲ್ಲಿ ಲಂಕಾ ನ್ಯೂಜಿಲೆಂಡ್ ಹಾಗೂ ಆಫ್ಘಾನ್ ವಿರುದ್ಧ ಸೋಲು ಕಂಡಿತ್ತು. 
ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕ ಪಡೆದಿರುವ ಲಂಕಾ, ಶನಿವಾರ ಆಸೀಸ್ ವಿರುದ್ಧ ಕಾದಾಟ ನಡೆಸಲಿದೆ. 
‘ಶ್ರೀಲಂಕಾ ತಂಡ ಕಾರ್ಡಿಫ್ ಹಾಗೂ ಬ್ರಿಸ್ಟಲ್ ನಲ್ಲಿ ಪಂದ್ಯ ಆಡಿದೆ. ಈ ವೇಳೆ ನಮಗೆ ಹಸಿರು ಪಿಚ್ ನೀಡಲಾಗಿತ್ತು. ಆದರೆ, ಬೇರೆ ತಂಡಗಳಿಗೆ ಫ್ಲ್ಯಾಟ್ ಪಿಚ್ ನೀಡಲಾಗಿದೆ. ಇನ್ನು ಆಸೀಸ್ ವಿರುದ್ಧವೂ ಹಸಿರು ಹೊದಿಕೆಯಂತಿರುವ ಪಿಚ್ ನೀಡಲಾಗಿದೆ’ ಎಂದು ಡಿ ಮೇಲ್ ದೂರಿದ್ದಾರೆ.
ಐಸಿಸಿ ಕೆಲವು ತಂಡಗಳಿಗೆ ಒಂದು ರೀತಿ ಪಿಚ್ ನೀಡುತ್ತಿದ್ದು, ನಮಗೆ ಬೇರೆ ಪಿಚ್ ನೀಡಲಾಗುತ್ತಿದೆ. ಕಾರ್ಡಿಫ್ ನಲ್ಲಿ ತರಬೇತಿ ಸಲಕರಣೆಗಳು ಉತ್ತಮವಾಗಿರಲಿಲ್ಲ. ಮೂರು ನೆಟ್ ಗಳಲ್ಲಿ ನಮಗೆ ಎರಡನ್ನು ಮಾತ್ರ ನೀಡಲಾಗಿದೆ. ಇನ್ನು ಬ್ರಿಸ್ಟಲ್ ನಲ್ಲಿ ನಮಗೆ ನೀಡಿದ ಹೋಟೆಲ್ ನಲ್ಲಿ ಈಜು ಕೊಳ ಇರಲಿಲ್ಲ. ಈ ಎಲ್ಲ ತೊಂದರೆಗಳನ್ನು ಐಸಿಸಿ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT