ಕ್ರಿಕೆಟ್

ವಿಶ್ವಕಪ್ 2019: ದ.ಆಫ್ರಿಕಾ ಮಾರಕ ದಾಳಿಗೆ ಬೆದರಿದ ಅಫ್ಘಾನ್ 125 ರನ್ ಗಳಿಗೆ ಆಲೌಟ್'

Raghavendra Adiga
ಲಂಡನ್: ಐಸಿಸಿ ವಿಶ್ವಕಪ್ ಶನಿವಾರ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಅಫ್ಘಾನಿಸ್ಥಾನ್ 127 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿದೆ.
ಮಳೆಯ ಕಾರಣ 48  ಓವರ್ ಗೆ ಕಡಿತಗೊಂಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ನಲುಗಿದ ಅಫ್ಘಾನ್ 34.1 ಓವರ್‌ಗಳಲ್ಲಿ 125 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು.
ಡಕ್ವರ್ತ್ ಲೂವಿಸ್ ನಿಯಮಾನುಸಾರ ದಕ್ಷಿಣ ಆಫ್ರಿಕಾ ಗೆಲುವಿಗೆ 127 ರನ್ ಗುರಿ ಒಡ್ಡಲಾಗಿದೆ.
ಅಫ್ಘಾನ್ ಪರ ಹಜ್ರತುಲ್ಲಾ ಝಜೈ (22) ಜತೆಗೆ ರಹ್ಮತ್ ಶಾ (6) ರಹ್ಮಾತ್ ಶಾ (6), ಹಶ್ಮತುಲ್ಲಾ ಶಾಹೀದಿ (8), ಅಸ್ಗರ್ ಅಫ್ಘಾನ್ (0) ನಿಇಕ್ರಂ ಅಲಿ ಖಿಲ್ (2), ಗುಲ್ಬದಿನ್ ನೈಬ್ (5)ರನ್ ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ದರು. 
ಈ ನಡುವೆ  20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಅಫ್ಘಾನಿಸ್ಥಾನ 69 ರನ್ ಗಳಿಸಿದ್ದ ವೇಳೆ ಮಳೆ ಬಂದ ಕಾರಣ ಪಂದ್ಯಕ್ಕೆ ಅಡ್ಡಿಯಾಗಿತ್ತು. ಆಗ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಪಂದ್ಯವನ್ನು 48ಕ್ಕೆ ಓವರ್ ಗಳಿಗೆ ಇಳಿಸಲಾಯಿತು.
ದಕ್ಷಿಣ ಆಫ್ರಿಕಾ ಪರವಾಗಿ ಇಮ್ರಾನ್ ತಾಹೀರ್ ನಾಲ್ಕು, ಕ್ರಿಸ್ ಮೋರಿಸ್ ಮೂರು ಹಾಗೂ ಆ್ಯಂಡಿಲ್ ಪೆಹ್ಲುಕಾಯೊ ಎರಡು ವಿಕೆಟ್ ಪಡೆದು ಮಿಂಚಿದರು.
SCROLL FOR NEXT