ಕ್ರಿಕೆಟ್

ವಿಶ್ವಕಪ್ 2019: ಪಾಕ್ ವಿರುದ್ಧ ವಿರಾಟ್ ಪಡೆ ಎಚ್ಚರಿಕೆಯಿಂದ ಆಡಬೇಕು- ಸೌರವ್ ಗಂಗೂಲಿ

Nagaraja AB
ಮ್ಯಾಂಚೆಸ್ಟರ್ : ಭಾರತ- ಪಾಕಿಸ್ತಾನ ನಡುವಣ ನಾಳಿನ ಹೈ ವೊಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕಾಗಿ ಕೋಟ್ಯಂತರ ಅಭಿಮಾನಿಗಳು ಕಾತುರರಿಂದ ಕಾಯುತ್ತಿರುವಂತೆ ಭಾರತ ತಂಡ  ಇದನ್ನು ಮನೋರಂಜನೆ ವಿಷಯವಾಗಿ ತೆಗೆದುಕೊಳ್ಳಬಾರದೆಂದು ಹಿರಿಯ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೊಲ್ಕರ್  ಎಚ್ಚರಿಕೆ ನೀಡಿದ್ದಾರೆ.
2017ರ ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ  ಮಾಡಿದ್ದಂತೆ ಪಾಕಿಸ್ತಾನವನ್ನು ಲಘುವಾಗಿ ತೆಗೆದುಕೊಳ್ಳಬಾರದೆಂದು ಸೌರವ್ ಗಂಗೂಲಿ  ಸ್ಟಾರ್ ಸ್ಫೋರ್ಟ್ಸ್ ಗೆ ಹೇಳಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹಗುರವಾಗಿ ಪರಿಗಣಿಸದಂತೆ  ಸಚಿನ್ ತೆಂಡೂಲ್ಕರ್  ಕೂಡಾ  ಸಲಹೆ ನೀಡಿದ್ದಾರೆ. 
ಪಾಕಿಸ್ತಾನದ ಬಗ್ಗೆ ಯಾವಾಗಲೂ ಊಹಿಸಲು ಸಾಧ್ಯವಿಲ್ಲ. ಅದು ಕೂಡಾ ಅಪಾಯಕಾರಿ ತಂಡ. ಆದ್ದರಿಂದ ಭಾರತ ತಂಡ ಲಘುವಾಗಿ ಪರಿಗಣಿಸಲೇಬಾರದು. ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಆಟವಾಡಬೇಕು. ಸರಿಯಾದ ಆಯೋಚನೆಯೊಂದನೆ ಗೆಲ್ಲುವು ಸಾಧಿಸಬೇಕೆಂದು ಗಂಗೂಲಿ  ಹೇಳಿದ್ದಾರೆ. 
2003ಕ್ಕೂ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನದಲ್ಲಿ ಟೀಂ ಇಂಡಿಯಾ ಗೆದ್ದಿರಲಿಲ್ಲ. ಆದರೆ, 2003ರಲ್ಲಿ ತಮ್ಮ ನಾಯಕತ್ವದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಟೆಸ್ಟ್ ಹಾಗೂ ಏಕದಿನ ಪಂದ್ಯವನ್ನು ಗೆದ್ದಿದ್ದೇವು. ಪಾಕಿಸ್ತಾನ ವಿರುದ್ಧದ ಆಟ ಭಾರತಕ್ಕೆ ಸಂತೋಷದ ಕ್ಷಣವಾಗಿತ್ತು ಎಂದು ಗಂಗೂಲಿ ಸ್ಮರಿಸಿಕೊಂಡಿದ್ದಾರೆ. 2003ರ ಪ್ರವಾಸವನ್ನು ತೆಂಡೊಲ್ಕರ್ ಕೂಡಾ ನೆನಪು ಮಾಡಿಕೊಂಡಿದ್ದಾರೆ.
ವಿಶ್ವಕಪ್ ಗೆದ್ದರೆ ನಿರಂತರವಾಗಿ ಗೆಲುವು ಸಾಧಿಸಿದ ತಂಡ ಭಾರತವಾಗಲಿದೆ. ಭಾರತ- ಪಾಕಿಸ್ತಾನ ನಡುವಣ ಪಂದ್ಯ ಯಾವಾಗಲೂ ಕುತೂಹಲಕಾಗಿ ಪಂದ್ಯವಾಗಿರುತ್ತದೆ. ಇದು ಐಸಿಸಿಗೂ ಗೊತ್ತಿದ್ದು, ಟಿಕೆಟ್ ನೀಡುವ ದಿನ ಕೇವಲ 15 ನಿಮಿಷಗಳಲ್ಲಿಯೇ ಟಿಕೆಟ್ ಗಳೆಲ್ಲಾ ಮಾರಾಟವಾಗುತ್ತವೆ. ಇದು ಭಾರತ- ಪಾಕಿಸ್ತಾನ ನಡುವಣ ಪಂದ್ಯಕ್ಕೆ ಮಹತ್ವ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ನಾಲ್ಕು ವರ್ಷಕ್ಕೊಮ್ಮೆ ಬರುವ  ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎಲ್ಲ ಪಂದ್ಯಗಳು ಮಹತ್ವದ್ದಾಗಿವೆ. ಆಟಗಾರಿಗೆ ಇದು ಮತ್ತೊಂದು ಪಂದ್ಯವಾಗಿರುತ್ತದೆ. ಆದರೆ, ಉತ್ತಮವಾದ ಬೌಲಿಂಗ್, ಕ್ಯಾಚಿಂಗ್ ಕಡೆಗೆ ಟೀಂ ಇಂಡಿಯಾ ಗಮನ ಹರಿಸುವಂತೆ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ.
SCROLL FOR NEXT