ಕ್ರಿಕೆಟ್

ಫಿಂಚ್ ಶತಕ, ಲಂಕಾ ಗೆಲುವಿಗೆ 335 ರನ್ ಗಳ ಸವಾಲಿನ ಮೊತ್ತ ನೀಡಿದ ಆಸೀಸ್

Lingaraj Badiger
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ (132 ಎಸೆತಗಳಲ್ಲಿ 153 ರನ್) ಹಾಗೂ ಭರವಸೆಯ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ (59 ಎಸೆತಗಳಲ್ಲಿ 73 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಗೆಲುವಿಗೆ 335 ರನ್ ಗಳ ಟಾರ್ಗೆಟ್ ನೀಡಿದೆ. 
ಟಾಸ್ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ, 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 334 ರನ್ ಕಲೆ ಹಾಕಿದೆ.
ಆಸೀಸ್ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಸರಣಿಯಲ್ಲಿ ನೀಡುತ್ತಿರುವ ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ಕಾಂಗರೂ ಹುಡುಗರು, ಲಂಕಾ ವಿರುದ್ಧ ಸಮಯೋಚಿತ ಆಟವಾಡಿದರು. 
ಕೊನೆ ಹಂತದಲ್ಲಿ ಕೇವಲ 25 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 46 ರನ‌್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್ ಆಸೀಸ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 334 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇನ್ನುಳಿದಂತೆ ಶಾನ್ ಮಾರ್ಶ್(3), ಅಲೆಕ್ಸ್ ಕ್ಯಾರಿ (4), ಪ್ಯಾಟ್ ಕಮಿನ್ಸ್ (0) ಹಾಗೂ ಮಿಚೆಲ್ ಸ್ಟಾರ್ಕ್ (5*) ರನ್ ಗಳಿಸಿದರು. 
ಇನ್ನು ಆಸ್ಟ್ರೇಲಿಯಾ ಒಡ್ಡಿರುವ 335 ರನ್‌ಗಳ ಬೃಹತ್ ಗುರಿ ಬೆನ್ನಟ್ಟುತ್ತಿರುವ ಶ್ರೀಲಂಕಾ ದಿಟ್ಟ ಪ್ರತ್ಯುತ್ತರ ನೀಡುತ್ತಿದೆ. 
SCROLL FOR NEXT