ವಿರಾಟ್ ಕೊಹ್ಲಿ 
ಕ್ರಿಕೆಟ್

ಬ್ಯಾಟಿಂಗ್ ವೇಳೆ ಕೊಹ್ಲಿ ಎಡವಟ್ಟು, ಔಟಾಗದಿದ್ದರೂ ಮೈದಾನದಿಂದ ಹೊರ ನಡೆದ 'ರನ್ ಮೆಷಿನ್ 'ವಿಡಿಯೋ

ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.

ಮ್ಯಾಂಚೆಸ್ಟರ್ : ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.
 ಮೊಹಮ್ಮದ್ ಅಮಿರ್ ಎಸೆದ 48 ನೇ ಓವರ್ ನ 4 ನೇ ಎಸೆತದಲ್ಲಿ ಚೆಂಡು ಬೌನ್ಸ್ ಆಯಿತು. ಅದನ್ನು ಬಾರಿಸಲು ಕೊಹ್ಲಿ ವಿಫಲವಾದರು. ಚೆಂಡು ಕೀಪರ್ ಸರ್ಫರಾಜ್ ಕೈಗೆ ಸೇರಿತು. ಪಾಕಿಸ್ತಾನೀಯರು ಅರೆ ಮನಸ್ಸಿನಿಂದ ಮನವಿ ಮಾಡಿದರು.
ಅಂಪೈರ್ ಅದನ್ನು ಪುರಸ್ಕರಿಸಲಿಲ್ಲ. ಆದರೆ, ಅಂಪೈರ್ ತೀರ್ಪಿಗೆ ಕಾಯದೆೇ ಕೊಹ್ಲಿ ಮೈದಾನದಿಂದ ಹೊರ ನಡೆದರು.  ಪುನರ್ ಪರಿಶೀಲನೆಯಲ್ಲಿ ಔಟಲ್ಲ ಎನ್ನುವುದು ಸ್ಪಷ್ಟವಾಗ ಕಾಣುತಿತ್ತು. ಹಾಗಿರುವಾಗ ಅಂಪೈರ್ ನೌಟೌಟು ಕೊಟ್ಟರು, ಕೊಹ್ಲಿ ಯಾಕೆ ಹೀಗೆ ಮಾಡಿದ್ದರು ಎಂಬುದು ಗೊತ್ತಿಲ್ಲ. 
ಡ್ರೆಸ್ಸಿಂಗ್ ಕೊಠಡಿಯಲ್ಲಿ ತಮ್ಮ ತಪ್ಪಿನಿಂದ ಕೊಹ್ಲಿ ಸಿಟ್ಟಾಗಿದ್ದು ಕಾಣಿಸುತಿತ್ತು. ಬ್ಯಾಟ್ ಗೆ  ಚೆಂಡು ತಾಕಿದಾಗ ಬರುವ ಒಂದು ಶಬ್ದ ಕೇಳಿಸಿದಂತಾಗಿದ್ದರಿಂದ  ಕೊಹ್ಲಿ ಇಂತಹ ನಿರ್ಧಾರ ಮಾಡಿರಬಹುದೆಂದು ಊಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷಕ್ಕೆ ಮುಜುಗರ ತಪ್ಪಿಸಲು ಸಚಿವ ಬಿ ನಾಗೇಂದ್ರ ರಾಜೀನಾಮೆ; ಸುಳ್ಳೇ ಬಿಜೆಪಿ ಮನೆ ದೇವರು: CM DK Shivakumar

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ! Video

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

Toxic: ಇಂತಹ ವಿಭಿನ್ನ ಸಿನಿಮಾ ಮಾಡಲು ಗಟ್ಸ್ ಬೇಕು; ಯಶ್ ಹಾಡಿ ಹೊಗಳಿದ ಕಿಚ್ಚ ಸುದೀಪ್!

ರಕ್ಷಾ ಬಂಧನ: ವಿರಾಟ್ ಕೊಹ್ಲಿ ಸಹೋದರಿಯ ಪೋಸ್ಟ್; ಫೋಟೋ ವೈರಲ್!