ಕ್ರಿಕೆಟ್

ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ: ಅಭಿಮಾನಿಗಳಿಗೆ ಶೊಯೆಬ್ ಮಲ್ಲಿಕ್ ಮನವಿ!

Srinivasamurthy VN
ಲಂಡನ್: ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ ಎಂದು ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಹೇಳಿದ್ದಾರೆ.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ದದ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟಿಗರನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಕೇವಲ ಕ್ರಿಕೆಟಿಗರನ್ನು ಮಾತ್ರವಲ್ಲದೇ ಅವರ ಕುಟುಂಬಸ್ಥರನ್ನೂ ಟ್ರೋಲ್ ಮಾಡಲಾಗುತ್ತಿದ್ದು, ಇದಕ್ಕೆ ಭಾರತದ ಟೆನ್ನಿಸ್ ತಾರೆ ಹಾಗೂ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಪತ್ನಿ ಸಾನಿಯಾ ಮಿರ್ಜಾ ಕೂಡ ಹೊರತಾಗಿಲ್ಲ. ಶೊಯೆಬ್ ಮಲ್ಲಿಕ್ ರೊಂದಿಗೆ ಸಾನಿಯಾರನ್ನು ಟ್ರೋಲ್ ಮಾಡಲಾಗುತ್ತಿದ್ದು, ಇತ್ತೀಚೆಗೆ ಪಾಕಿಸ್ತಾನದ ನಟಿ ವಿಣಾ ಮಲ್ಲಿಕ್ ಮತ್ತು ಸಾನಿಯಾ ಮಿರ್ಜಾ ಟ್ವೀಟ್ ವಾರ್ ವೈರಲ್ ಆಗಿತ್ತು.

ಈ ಟ್ವೀಟ್ ವಾರ್ ನಡುವೆಯೇ ಶೊಯೆಬ್ ಮಲ್ಲಿಕ್ ಕೊನೆಗೂ ತಮ್ಮ ಮೌನ ಮುರಿದಿದ್ದು, ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡಿ, ಕುಟುಂಬವನ್ನು ಎಳೆದು ತರಬೇಡಿ ಎಂದು ಹೇಳಿದ್ದಾರೆ. 'ನಾನು ಕಳೆದ 20 ವರ್ಷಗಳಿಂದ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ವೈಯುಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಾನೇ ಸ್ಪಷ್ಟನೆ ನೀಡಬೇಕು. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಜೂನ್ 13ರ ವಿಡಿಯೋ ಜೂನ್ 15ರ ವಿಡಿಯೋ ಅಲ್ಲ. ಅಂದರೆ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. 

ಎಲ್ಲ ಕ್ರಿಕೆಟಿಗರ ಪರವಾಗಿ ನಾನು ಕೇಳುತ್ತಿದ್ದೇನೆ. ಕನಿಷ್ಟ ಪಕ್ಷ ನಮ್ಮ ಕುಟುಂಬಗಳಿಗೆ ಗೌರವ ನೀಡಿ. ಕ್ಷುಲ್ಲಕ ವಿಚಾರದಲ್ಲಿ ನಮ್ಮ ಕುಟುಂಬಸ್ಖರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ. 
SCROLL FOR NEXT