ರಶೀದ್ ಖಾನ್ 
ಕ್ರಿಕೆಟ್

ನಂ.1 ಬೌಲರ್ ರಶೀದ್ ಖಾನ್‌ನನ್ನು ಅಪಹಾಸ್ಯ ಮಾಡಿ, ಕ್ಷಮೆ ಕೇಳಿದ ಐಸ್ ಲ್ಯಾಂಡ್!

ಐಸಿಸಿ ಟಿ20 ಕ್ರಿಕೆಟ್ ನಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿರುವ ರಶೀದ್ ಖಾನ್ ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 56 ಎಸೆತಗಳಲ್ಲಿ...

ಲಂಡನ್: ಐಸಿಸಿ ಟಿ20 ಕ್ರಿಕೆಟ್ ನಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿರುವ ರಶೀದ್ ಖಾನ್ ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 56 ಎಸೆತಗಳಲ್ಲಿ 110 ರನ್ ಹೊಡೆಸಿಕಂಡು ದುಬಾರಿ ಎನಿಸಿಕೊಂಡಿದ್ದರು. ಇದಕ್ಕೆ ಐಸ್ ಲ್ಯಾಂಡ್ ಕ್ರಿಕೆಟ್ ಟ್ವೀಟ್ ಮಾಡಿ ಅಪಹಾಸ್ಯ ಮಾಡಿತ್ತು.
ಇಂಗ್ಲೆಂಡ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಇಯಾನ್ ಮೊರ್ಗನ್ ಆಫ್ಘಾನ್ ಬೌಲರ್ ಗಳಿಗೆ ಬೆಂಡೆತ್ತಿದ್ದರು. ಅದೇ ರೀತಿ ರಶೀದ್ ಖಾನ್ ಬೌಲಿಂಗ್ ನಲ್ಲೂ ಸಿಕ್ಸರ್-ಬೌಂಡರಿಗಳನ್ನು ಸಿಡಿಸಿದ್ದರು. ಪರಿಣಾಮ ರಶೀದ್ 56 ಎಸೆತಗಳಲ್ಲೇ 110 ರನ್ ಹೊಡೆಸಿಕೊಂಡಿದ್ದರು.
ಇದನ್ನೇ ಮುಂದಿಟ್ಟುಕೊಂಡು ಐಸ್ ಲ್ಯಾಂಡ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅಪಹಾಸ್ಯ ಮಾಡಿತ್ತು. ಗರಿಷ್ಠ ರನ್ ಹೊಡೆಸಿಕೊಂಡ ಬೌಲರ್ ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಕ್ರಿಕೆಟ್ ದಿಗ್ಗಜರೂ ಆಕ್ರೋಶ ವ್ಯಕ್ತಪಡಿಸಿದ್ದರು. 
ಇನ್ನು ತಮ್ಮ ಟ್ವೀಟ್ ಗೆ ಭಾರೀ ಟೀಕೆ ವ್ಯಕ್ತವಾಗ ಹಿನ್ನೆಲೆಯಲ್ಲಿ ಐಸ್ ಲ್ಯಾಂಡ್ ಕ್ರಿಕೆಟ್ ಕ್ಷಮೆ ಕೇಳಿದೆ. ನಮ್ಮಿಂದ ತಪ್ಪಾಗಿದೆ ಎಂದು ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel