ಸೌಥಂಪ್ಟನ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 11 ರನ್ ಗಳ ಅಂತರದಿಂದ ವಿರೋಚಿತ ಗೆಲುವು ಸಾಧಿಸಿದೆ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀ ಇಂಡಿಯಾ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು.ಆರಂಭಿಕ ಆಟಗಾರ ಕೆ ಎಲ್ ರಾಹುಲ್ 30 ರನ್ ಗಳಿಸಿ ಮೊಹಮ್ಮದ್ ನಬಿ ಬೌಲಿಂಗ್ ನಲ್ಲಿ ಹಜರತ್ ಜಾಝೈಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ರೋಹಿತ್ ಶರ್ಮಾ, ಮುಜಿಬ್ ಉರ್ ರೆಹಮಾನ್ ಬೌಲಿಂಗ್ ನಲ್ಲಿ ಕೇವಲ 1 ರನ್ ಗಳಿಗೆ ಔಟ್ ಆಗುವ ಮೂಲಕ ಆರಂಭಿಕ ಆಘಾತ ನೀಡಿದರು.
ನಂತರ ಮೂರನೇ ವಿಕೆಟ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಕ್ರಮವಾಗಿ 67 ಹಾಗೂ 29 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೂ ಅಪ್ಘಾನಿಸ್ತಾನದ ಶಿಸ್ತುಬದ್ಧ ಆಟದಿಂದಾಗಿ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ. ಮೊಹಮ್ಮದ್ ನಬಿ ಬೌಲಿಂಗ್ ನಲ್ಲಿ ಕೊಹ್ಲಿ ಔಟಾದರೆ, ವಿಜಯ್ ಶಂಕರ್ ಎಲ್ ಬಿಡಬ್ಲ್ಯೂವಿಗೆ ಬಲಿಯಾದರು.
ತದನಂತರ ಬಂದ ಎಂಎಸ್ ಧೋನಿ 28, ಹಾರ್ದಿಕ್ ಪಾಂಡ್ಯ 7 , ಮೊಹಮ್ಮದ್ ಶಮಿ ಕೇವಲ 1 ರನ್ ಗಳಿಗೆ ಔಟಾದರು.ಅಫ್ಘಾನಿಸ್ತಾನ ಪರ ಗುಲ್ಬದ್ದೀನ್ ನೈಬ್ ಹಾಗೂ ಮೊಹಮ್ಮದ್ ನಬಿ ತಲಾ 2, ರಶೀದ್ ಖಾನ್, ರೆಹಮತ್ ಶಾ, ಅಫ್ತಬ್ ಅಲಂ, ಮುಜಿಮ್ ಉರ್ ರೆಹಮಾನ್ ತಲಾ 1 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾವನ್ನು 224ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಭಾರತ ನೀಡಿದ 225 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ಇನ್ನೂ ಒಂದು ವಿಕೆಟ್ ಬಾಕಿ ಇರುವಂತೆಯೇ 213 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಶಮಿ 4, ಬೂಮ್ರಾ , ಚಾಹೆಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲ್ಲಲು ಪ್ರಮುಖ ಪಾತ್ರ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics