ಸೌಂಥೆಪ್ಟನ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಕೊಹ್ಲಿ ಪಡೆ ಗೆಲುವು ಸಾಧಿಸಲು ನೆರವಾದರು.
ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ ಅಫ್ಘಾನಿಸ್ತಾನದ ನಬಿ, ಅಲಮ್ ಹಾಗೂ ಉರ್ ರೆಹಮಾನ್ ಅವರನ್ನು ಒಬ್ಬರಾದ ನಂತರ ಮತ್ತೊಬ್ಬರಂತೆ ಫೆವಿಲಿಯನ್ ಗೆ ಅಟ್ಟುವ ಮೂಲಕ ಟೀಂ ಇಂಡಿಯಾ ಗೆಲ್ಲುವಿನ ಸಂಭ್ರಮಕ್ಕೆ ಕಾರಣರಾದರು.