ವಿರಾಟ್ ಕೊಹ್ಲಿ 
ಕ್ರಿಕೆಟ್

ವಿಶ್ವಕಪ್ 2019: ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಬೌಲರ್ ಗಳ ಅದ್ಬುತ ಪ್ರದರ್ಶನ- ವಿರಾಟ್ ಕೊಹ್ಲಿ

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಪ್ರದರ್ಶನ ಅದ್ಬುತವಾಗಿತ್ತು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೌಂಥೆಪ್ಟನ್:  ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್  ಗಳ ಪ್ರದರ್ಶನ ಅದ್ಬುತವಾಗಿತ್ತು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಬೂಮ್ರಾ 49 ನೇ ಓವರ್ ಪೂರ್ಣಗೊಳಿಸಿದ ನಂತರ ಕೊನೆಯ ಓವರ್ ನಲ್ಲಿ ಶಮಿ  ಹೆಚ್ಚಿನ ರನ್ ಗಳನ್ನು ಕೊಡದಂತೆ ಉತ್ತಮ ಆಟವಾಡಿದ್ದಾರೆ. ಚಾಹೆಲ್ ಕೂಡಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಒಟ್ಟಾರೇ ಎಲ್ಲ ಬೌಲರ್ ಗಳು ಅದ್ಬುತ ಪ್ರದರ್ಶನ ನೀಡಿರುವುದಾಗಿ ಕೊಹ್ಲಿ ಕೊಂಡಾಡಿದರು. 
ಅಂದುಕೊಂಡಂತೆ ಪಂದ್ಯ  ನಡೆಯುತ್ತಿರಲಿಲ್ಲ. ಆದರೆ, ಕೊನೆಯ ಎಸೆತವರೆಗೂ ಹೋರಾಡುವ ಮೂಲಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಗೆಲುವಿನಿಂದಾಗಿ ಬೃಹತ್ ಪ್ರೀತಿ ಗಳಿಸಿದ್ದು, ಆತ್ಮಸ್ಥೈರ್ಯವನ್ನು  ಇಮ್ಮಡಿಗೊಳಿಸಿರುವುದಾಗಿ ಕೊಹ್ಲಿ ಹೇಳಿದರು.
ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ವಿಕೆಟ್ ಗಳ ನೆರವಿನಿಂದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ 11 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ಊರಸವಳ್ಳಿಯಂತೆ ಬದಲಾಗ್ತಾರೇ: ಹಿಂದಿ ಬರಲ್ಲ ಅಂತ ಪೋಸ್ ಕೊಟ್ಟೋರು, ದೆಹಲಿಯ CJPಯಲ್ಲಿ ಹಿಂದಿಲೇ ಭಾಷಣ: ನೆಟ್ಟಿಗರು ಗರಂ, Video!

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..