ಕ್ರಿಕೆಟ್

ರನ್ ಮಷೀನ್ ಕೊಹ್ಲಿಯಿಂದ ಮತ್ತೊಂದು ಅಪರೂಪದ ವಿಶೇಷ ದಾಖಲೆ!

Srinivas Rao BV
ರಾಂಚಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದ್ದರೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 
41 ನೇ ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಏಕದಿನ ಸರಾಸರಿಯನ್ನು 60.08 ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. 217 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿಯ ಅಂತಾರಾಷ್ಟ್ರೀಯ ಏಕದಿನ ಸರಾಸರಿ 60.08 ರಷ್ಟಿದ್ದು, ಕಡಿಮೆ ಇನ್ನಿಂಗ್ಸ್ ಗಳಲ್ಲಿ 60 ಕ್ಕಿಂತಲೂ ಹೆಚ್ಚು ಸರಾಸರಿಯನ್ನು ತಲುಪಿರುವ ಎರಡನೇ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್ 102 ಇನ್ನಿಂಗ್ಸ್ ಗಳಲ್ಲಿ 62.13 ಸರಾಸರಿ ತಲುಪಿದ್ದ ಬ್ಯಾಟ್ಸ್ಮನ್  ಮೈಕೆಲ್ ಬೆವನ್ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗನಾಗಿದ್ದಾರೆ. 
ಮೂರನೇ ಸ್ಥಾನದಲ್ಲಿ 100 ಇನ್ನಿಂಗ್ಸ್ ಗಳಲ್ಲಿ 56.88 ಸರಾಸರಿ ಹೊಂದಿರುವ ವಿವಿಯನ್ ರಿಚರ್ಡ್ಸ್ ಮೂರನೇ ಕ್ರಿಕೆಟಿಗರಾಗಿದ್ದು, ನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್ ಅಮ್ಲಾ (108 ಇನ್ನಿಂಗ್ಸ್ ಗಳಲ್ಲಿ 56.73 ಸರಾಸರಿ) ಆಸ್ಟ್ರೇಲಿಯಾದ ಮೈಕಲ್ ಹಸ್ಸಿ (107 ಇನ್ನಿಂಗ್ಸ್ ಗಳಲ್ಲಿ 54.90 ಸರಾಸರಿ) ಹಾಗೂ 192 ಇನ್ನಿಂಗ್ಸ್ ಗಳಲ್ಲಿ 54.56 ಸರಾಸರಿ ಗಳಿಸಿರುವ  ಎಬಿ ಡಿ ವಿಲಿಯರ್ಸ್ ಇದ್ದಾರೆ. 
SCROLL FOR NEXT