ಶೇನ್ ವಾರ್ನ್ 
ಕ್ರಿಕೆಟ್

ವಿಶ್ವಕಪ್ ಕ್ರಿಕೆಟ್ : ಧೋನಿ ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ- ಶೇನ್ ವಾರ್ನ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೊಗಸಾದ ನಾಯಕ ಎಂದು ಕರೆದಿರುವ ಶೇನ್ ವಾರ್ನ್ ಎಂ.ಎಸ್. ಧೋನಿಯನ್ನು ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ ಎಂದಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೊಗಸಾದ ನಾಯಕ ಎಂದು ಕರೆದಿರುವ ಶೇನ್ ವಾರ್ನ್ ಎಂ.ಎಸ್. ಧೋನಿಯನ್ನು  ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರ ಎಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅಂತಹ ಅನುಭವಿ ಆಟಗಾರ  ಟೀಂ ಇಂಡಿಯಾದಲ್ಲಿ ಇರಲೇಬೇಕಾಗುತ್ತದೆ. ನನ್ನಗಾಗಿ ಧೋನಿ ಅತ್ಯುತ್ತಮ ಆಟಗಾರರಾಗಿದ್ದು, ಟೀಂ ಇಂಡಿಯಾದಲ್ಲಿ ಇರಲೇಬೇಕಾದ ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ವಿಕೇಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಧೋನಿ ಅವರ ಅನುಭವವನ್ನು ಶೇನ್ ವಾರ್ನ್ ಹೊಗಳಿದ್ದು, ವಿಶ್ವಕಪ್ ನಲ್ಲಿ ಧೋನಿ ಅವರ ಅನುಭವ ಹಾಗೂ ನಾಯಕತ್ವದ ಗುಣಗಳು ವಿರಾಟ್ ಕೊಹ್ಲಿ ಅವರ ನಾಯಕತ್ವಕ್ಕೆ ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಾರಿಯ ವಿಶ್ವಕಪ್ ನಲ್ಲಿ ಇಂಡಿಯಾ ಹಾಗೂ ಇಂಗ್ಲೆಂಡ್ ಗೆಲ್ಲುವ ಫೆವರಿಟ್ ತಂಡಗಳಾಗಿವೆ ಏಕೆಂದರೆ  ಕಳೆದ ಆರರಿಂದ 12 ತಿಂಗಳಿಂದ  ಅವರು ಆಡುತ್ತಲೇ ಇದ್ದಾರೆ. ಆದರೆ, ಆಸ್ಟ್ರೇಲಿಯಾ ಕೂಡಾ ಆ ನಂಬಿಕೆಯನ್ನು ಈಗ ಹೆಚ್ಚಿಸಿಕೊಂಡಿದೆ. ಅವರು ಕೂಡಾ ಗೆಲ್ಲಬಹುದು ಎಂದು ಶೇನ್ ವಾರ್ನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!