ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ 5ನೇ ಏಕದಿನ ಪಂದ್ಯ: ಭಾರತಕ್ಕೆ 273 ರನ್ ಗುರಿ

Srinivas Rao BV
ನವದೆಹಲಿ: ಭಾರತ ತಂಡದ ವಿರುದ್ಧ ಅಂತಿಮ ಹಾಗೂ 5ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ದಾಖಲಿಸಿದೆ. 
ಭಾರತಕ್ಕೆ ಗೆಲ್ಲಲು 273 ರನ್ ಗಳು ಬೇಕಿದೆ.  ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ 106 ಎಸೆತಗಳಲ್ಲಿ ಆಕರ್ಷಕ ಶತಕ ದಾಖಲಿಸಿ ತಂಡಕ್ಕೆ ನೆರವಾದರು. ಪೀಟರ್ ಹ್ಯಾಂಡ್ಸ್ಕೋಂಬ್ 60 ಎಸೆತಗಳಲ್ಲಿ 52 ರನ್ ದಾಖಲಿಸಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ 30 ರನ್ ತಲುಪುವುದಕ್ಕೂ  ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. 
ಭುವನೇಶ್ವರ್ ಕುಮಾರ್ 48 ರನ್ ನೀಡಿ 3 ವಿಕೆಟ್ ಪಡೆದರೆ ಮೊಹಮ್ಮದ್ ಶಮಿ 57 ರನ್ ನೀಡಿ 2 ವಿಕೆಟ್, ರವೀಂದ್ರ ಜಡೇಜಾ 45 ರನ್ ನೀಡಿ 2 ವಿಕೆಟ್, ಕುಲ್ದೀಪ್ ಯಾದವ್ 74 ರನ್ ನೀಡಿ 1 ವಿಕೆಟ್ ಗಳಿಸಿದರು. 
SCROLL FOR NEXT