ಕ್ರಿಕೆಟ್

ಲೈಂಗಿಕ ಕಿರುಕುಳ ಪ್ರಕರಣ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುಧ್ಹ ಚಾರ್ಜ್ ಶೀಟ್ ದಾಖಲು

Raghavendra Adiga
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್  ಮೊಹಮ್ಮದ್ ಶಮಿ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಇದರಿಂದಾಗಿ ವೇಗಿ ಶಮಿ ಕ್ರಿಕೆಟ್ ಭವಿಷ್ಯ ಡೋಲಾಯಮಾನವಾಗಿದೆ.
ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ ನಲ್ಲಿ ಶಮಿ ಆಡಲಿದ್ದಾರೆಯೆ ಎನ್ನುವ ಪ್ರಶ್ನೆ ಮೂಡಿದೆ.
ಶಮಿ ಅವರ ಪತ್ನಿ  ಹಸೀನ್ ಜಹಾನ್ ಅವರ ದೂರಿನ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೋಲೀಸರು ಕ್ರಿಕೆಟಿಗನ ವಿರುಧ್ಹ ಐಪಿಸಿ ಸೆಕ್ಷನ್ 498ಎ(ವರದಕ್ಷಿಣೆ ಕಿರುಕುಳ) ಮತ್ತು 354ಎ (ಲೈಂಗಿಕ ದೌರ್ಜನ್ಯ) ವಿಭಾಗದಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ಶಮಿ ಕೌಟುಂಬಿಕ ದೌರ್ಜನ್ಯ, ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆಂದು ಅವರ ಪತ್ನಿ ಹಸೀನ್ ಕಳೆದ ವರ್ಷವೇ ದೂರು ಸಲ್ಲಿಸಿದ್ದರು.ಅಲ್ಲದೆ ತಮ್ಮ ಪತಿಯ ವಿವಾಹೇತರ ಸಂಬಂಧಗಳನ್ನು ಸಹ ಸಾಮಾಜಿಕ ತಾಣದ ಮೂಲಕ ಬಯಲುಗೊಳಿಸಿದ್ದರು.
ಈ ಕಾರಣದಲ್ಲಿ ಬಿಸಿಸಿಐ ಶಮಿ ಜತೆಗಿನ ಒಪ್ಪಂದ ಕಡಿತ ಂಆಡಿಕೊಂಡಿದ್ದರೂ ಸಹ ಕ್ರಿಕೆಟಿಗ ಮೋಸದಾಟದಲ್ಲಿ ಭಾಗವಹಿಸಿರುವ ಬಗ್ಗೆ ಸಾಕ್ಷಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಶಮಿ ಕ್ರಿಕೆಟ್ ಆಡುವುದಕ್ಕೆ ಅನುಮತಿ ನೀಡಿದೆ.
ಇತ್ತೀಚೆಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸಹ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಶಮಿ ವಿಶ್ವಕಪ್ ನಲ್ಲಿ ಸಹ ಭಾರತದ ಪರ ಉತ್ತಮ ಪ್ರದರಶನ ತೀರುವ ವಿಶ್ವಾಸದಿಂದ್ದ್ದರು.
SCROLL FOR NEXT