ಕ್ರಿಕೆಟ್

ಹುಟ್ಟಿದ 3 ತಿಂಗಳಲ್ಲಿ ರೋಹಿತ್ ಶರ್ಮಾ ಪುತ್ರಿ 'ಸಮೈರಾ' ಆಫ್ರಿಕಾದಲ್ಲಿ ಆಕರ್ಷಣೆಯ ಕೇಂದ್ರಬಿಂದು!

Srinivas Rao BV
ಭಾರತದ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಪುತ್ರಿ ಈಗ ಆಫ್ರಿಕಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಳೆ. 
2018 ರ ಡಿಸೆಂಬರ್ ನಲ್ಲಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೆಲವೇ ದಿನಗಳಲ್ಲಿ ಸಮೈರಾ ತಮ್ಮ ಪುತ್ರಿಯ ಹೆಸರು ಎಂಬುದನ್ನು ಟ್ವಿಟರ್ ನಲ್ಲಿ ರೋಹಿತ್ ಶರ್ಮಾ ಸಂತಸದಿಂದ ಹಂಚಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ಪುತ್ರಿಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುವ ಸಂತಸವನ್ನು  ರೋಹಿತ್ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮ ಪುತ್ರಿ ಸಮೈರಾ ಹೆಸರನ್ನು ಆಫ್ರಿಕಾದಲ್ಲಿನ ನವಜಾತ ಹೆಣ್ಣು ಘೇಂಡಾಮೃಗಕ್ಕೆ ನಾಮಕರಣ ಮಾಡಲಾಗಿದೆ. ಈ ವಿಷಯವನ್ನು ಸ್ವತಃ ರೋಹಿತ್ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ  ಪ್ರಕೃತಿ ಸಂರಕ್ಷಣೆ ಚಟುವಟಿಕೆಗಳ ಬೆಂಬಲಿಗರಾಗಿದ್ದಾರೆ. 
ಘೇಂಡಾಮೃಗಗಳ ಸಂರಕ್ಷಣೆ ಅಗತ್ಯವಾಗಿದ್ದು, ನಮ್ಮ ಹೃದಯಕ್ಕೆ ಹತ್ತಿರುವ ಸಂಗತಿಯಾಗಿದೆ. ಸುಡಾನ್ ಈ ನಿಟ್ಟಿನಲ್ಲಿ ಹೆಚ್ಚು ಅರ್ಥಪೂರ್ಣವಾಗಿದೆ. ನವಜಾತ ಹೆಣ್ಣು ಘೇಂಡಾಮೃಗಕ್ಕೆ ನಮ್ಮ ಮಗಳ ಹೆಸರನ್ನು ನಾಮಕರಣ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. 2 ತಿಂಗಳ ನಮ್ಮ ಮಗಳ ಹೆಸರನ್ನು ಘೇಂಡಾಮೃಗಕ್ಕೆ ನಾಮಕರಣ ಮಾಡಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ವಿಶೇಷ ಘಟನೆಯಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. 
ನನ್ನ ಮಗಳನ್ನು ಆಕೆಯ ಹೆಸರನ್ನು ನಾಮಕರಣ ಮಾಡಲಾಗಿರುವ ಘೇಂಡಾಮೃಗ ನೋಡಲು ಕರೆತರಬೇಕು ಎಂದು ಇನ್ಸ್ಟಾಗ್ರಾಮ್ ನಲ್ಲಿ ರೋಹಿತ್ ಬರೆದಿದ್ದು ಮರಿ ಘೇಂಡಾಮೃಗದ ಫೋಟೊವನ್ನು ಹಂಚಿಕೊಂಡಿದ್ದಾರೆ. 2015 ರಿಂದ ಪೇಟಾದ (PETA) ರಾಯಭಾರಿಯಾಗಿರುವ ರೋಹಿತ್ ಶರ್ಮಾ ಹಾಗೂ ರಿತಿಕಾ ಕೀನ್ಯಾದ ಘೇಂಡಾಮೃಗ ರಕ್ಷಣಾ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 
SCROLL FOR NEXT